

ಮಂಗಳೂರು: ಕುಲಶೇಖರದಲ್ಲಿರುವ ಹೋಲಿ ಕ್ರಾಸ್ ಚರ್ಚ್ (ಕೋರ್ಡೆಲ್ ಚರ್ಚ್)ನಲ್ಲಿ ಮುಂಬರುವ ಮೋಂತಿ ಫೆಸ್ಟ್‌ಗೆ ಪೂರ್ವಭಾವಿಯಾಗಿ ನಡೆಸುವ 9 ದಿನಗಳ ನೊವೆನಾ ಆರಂಭಗೊಂಡಿತು.
ಮೊದಲ ದಿನದ ನೊವೆನಾದ ಅಂಗವಾಗಿ ಬಲಿಪೂಜೆಯ ಬಳಿಕ ಬಾಲ ಮೇರಿಯ ಮೂರ್ತಿ ಇಟ್ಟು ಮಕ್ಕಳಿಂದ ಹೂವುಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್ ಫರ್ನಾಂಡಿಸ್, ಸಹಾಯಕ ಧರ್ಮಗುರುಗಳಾದ ಐವನ್ ಕೊರ್ಡೆರೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ರೂತ್ ಕಾಸ್ಟೆಲಿನೋ, ಕಾರ್ಯದರ್ಶಿ ಅನಿಲ್ ಡೇಸಾ ಉಪಸ್ಥಿತರಿದ್ದರು.