ಕುಳಾಯಿ ಪಾದಚಾರಿಗೆ ಕಾರು ಡಿಕ್ಕಿಗಂಭೀರ ಗಾಯ

accident-15
Published on

ಮಂಗಳೂರು: ಕುಳಾಯಿಯಲ್ಲಿ ಫಾಸ್ಟ್ ಫುಡ್‌ನಲ್ಲಿ ಊಟ ಮಾಡಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ ಕುಮಾರ್ (33) ಗಾಯಾಳು. ಕಿಶನ್ ಕುಮಾರ್ ಎಂಬಾತ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿಯಾದ ಪರಿಣಾಮ ರಾಜ್ ಕುಮಾರ್ ಅವರ ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯ, ಎಡ ಕಣ್ಣಿನ ಬಳಿ ಚರ್ಮ ಹರಿದ ಗಾಯ ವಾಗಿದೆ. ಕಾರು ಚಾಲಕ ಹಾಗೂ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net