ಇಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಟ್ಟಡ ಉದ್ಘಾಟನೆ

pc
Published on

ಮಂಗಳೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ನಿರ್ಮಿಸಿರುವ ಕೆ.ಕೆ.ಎಂ.ಪಿ. ಸಮುದಾಯ ಭವನದ ಮೊದಲನೇ ಅಂತಸ್ತಿನ ಲೋಕಾರ್ಪಣೆ ಜ.28ರಂದು ಬೆಳಗ್ಗೆ 11 ಗಂಟೆಗೆ ಬೊಂದೇಲ್‌ನ ಮಹಾತ್ಮನಗರದಲ್ಲಿ ನಡೆಯಲಿದೆ.

ಬೆಳಗ್ಗೆ 9 ಗಂಟೆಗೆ ಪದವಿನಂಗಡಿಯ ದುರ್ಗಾ ಕಟ್ಟೆಯಿಂದ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ಅಂಗವಿಕಲರಿಗೆ, ವೃದ್ದಾಪ್ಯರಿಗೆ, ವಿಧವೆಯರಿಗೆ ಸಹಾಯಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್‌ಮೋರೆ ಶನಿವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.


ಕ್ಷತ್ರಿಯ ಮರಾಠ ಜಾತಿಯನ್ನು 3ಬಿ ವರ್ಗದಿಂದ 2ಎ ವರ್ಗಕ್ಕೆ ಸೇರಿಸಬೇಕು. ಈ ಬಗ್ಗೆ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಯತ್ನಗಳು ನಡೆದಿದ್ದರೂ ಅದು ಯಶಸ್ವಿಯಾಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸಮಾಜಕ್ಕೆ ಅಗತ್ಯವಿರುವ ಅನುದಾನ, ಸವಲತ್ತುಗಳನ್ನು ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.


ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಚಂದ್ರಮಾನ್, ಕೋಶಾಧಿಕಾರಿ ನಾಗೇಶ್ ಎನ್. ಪಾಟೀಲ್, ಕ್ರೀಡಾ ಕಾರ್ಯದರ್ಶಿ ಎಚ್.ಮಾಧವ ರಾವ್, ಮಹಿಳಾ ಸಂಚಾಲಕಿ ಸವಿತಾ ಎನ್. ಪಾಟೀಲ್, ಧನ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net