ಕೊಟ್ಟಾರ ಸಾಗರ್‌ಕೋರ್ಟ್ ಲೇಔಟ್‌ ಮನೆಯಿಂದ ನಗದು-ಚಿನ್ನಾಭರಣ ಕಳವು

FIR-2
Published on

ಮಂಗಳೂರು: ಕೊಟ್ಟಾರ ಸಾಗರ್‌ಕೋರ್ಟ್ ಲೇಔಟ್‌ನ ಮನೆಯೊಂದರಿಂದ ಸುಮಾರು 61,700 ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯವರು ಮಾ.15ರಂದು ಬೆಂಗಳೂರಿಗೆ ತೆರಳಿದ್ದರು. ಮಾ.18ರಂದು ಮನೆ ಕೆಲಸದಾಕೆ ಕರೆ ಮಾಡಿ ಮನೆಯ ಎದುರಿನ ಬಾಗಿಲಿನ ಲಾಕ್ ಮುರಿದು ಬಾಗಿಲು ಓಪನ್ ಆಗಿರುವ ಬಗ್ಗೆ ತಿಳಿಸಿದ್ದಾಳೆ. ಕೂಡಲೇ ಮನೆಯವರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದಾರೆ.

ಮನೆಯವರು ಮಂಗಳೂರಿಗೆ ಬಂದು ನೋಡಿದಾಗ ಹಾಲ್‌ಗೆ ಹೊಂದಿಕೊಂಡಿದ್ದ ಬೆಡ್ ರೂಂ.ನ ಗೋಡೆಗೆ ಅಳವಡಿಸಿದ್ದ ವಾರ್ಡ್‌ರೋಬ್‌ನಲ್ಲಿದ್ದ ಒಡವೆಗಳು ಇಲ್ಲವಾಗಿತ್ತು. ಮೊದಲ ಅಂತಸ್ತಿನಲ್ಲಿದ್ದ ಬೆಡ್‌ರೂಂನಲ್ಲಿದ್ದ ಸ್ಟೀಲ್ ಕಪಾಟು ತೆರೆದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ವಾರ್ಡ್‌ರೋಬ್‌ನಲ್ಲಿದ್ದ 12 ಸಾವಿರ ರೂ. ಮೌಲ್ಯದ 2 ಗ್ರಾಂನ ವಜ್ರದ ಮೂಗುತಿ, 38 ಸಾವಿರ ರೂ. ಮೌಲ್ಯದ 4.14 ಗ್ರಾಂ. ತೂಕದ ಒಂದು ಜೊತೆ ಬಂಗಾರದ ಕಿವಿಯೋಲೆ, 11,700 ರೂ. ಮೌಲ್ಯದ 0.856 ಗ್ರಾಂನ ವಜ್ರದ ಕಿವಿಯ ಟಿಕ್ಕಿ ಸೇರಿದಂತೆ ಒಟ್ಟು 61,700 ರೂ. ಮಲ್ಯದ ಸೊತ್ತುಗಳು ಕಳವಾಗಿದೆ ಎಂದು ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net