

ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಸಹ ಸಂಸ್ಥೆಗಳಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಸಲ್ಲಿಸಿ ಕಾಲೇಜಿನ ಹಣಕಾಸು ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾದ ಮಧುಮತಿ ಎಚ್.ಎಸ್. ಅವರನ್ನು ಕಾಲೇಜಿನ ಕಚೇರಿ ಸಿಬ್ಬಂದಿಗಳ ವತಿಯಿಂದ ಇತ್ತೀಚೆಗೆ ಸನ್ಮಾನಿಸಿ, ಬೀಳ್ಕೊಡಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಲೇಜಿನ ಡೀನ್ ಡಾ.ಬಿ.ಉಣ್ಣಿಕೃಷ್ಣನ್ ಮಾತನಾಡಿ, ಮಧುಮತಿ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.
ಅಸೋಸಿಯೇಟ್ ಡೀನ್ಗಳಾದ ಡಾ.ಸುರೇಶ್ ಕುಮಾರ್ ಶೆಟ್ಟಿ, ಡಾ.ಶೀತಲ್ ಉಳ್ಳಾಲ್, ಹಣಕಾಸು ವಿಭಾಗದ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಪೈ, ಲತಾ ನಾಯಕ್ ಅವರು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಹಣಕಾಸು ವಿಭಾಗದ ನೂತನ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ ದೃಶ್ಯಾ ಕಾಮತ್ ಅವರನ್ನು ಅಭಿನಂದಿಸಲಾಯಿತು.
ಕ್ವೆಸ್ ಕಾರ್ಪ್ ಉಪಾಧ್ಯಕ್ಷ ಹರೀಶ್ ಶೆಣೈ ಕೆ., ಕೆಎಂಸಿ ಕಚೇರಿಯ ಮ್ಯಾನೇಜರ್ ಧಮೇರ್ಂದ್ರ ಎಂ.ಪಿ., ಚೀಫ್ ವಾರ್ಡನ್ ಲೆ.ಕ.ರಮಾನಾಥ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಹೇಮಾವತಿ ಭಂಡಾರಿ, ಸತೀಶ್ ಶೆಟ್ಟಿ ಕೆ., ಆರ್ವಿನ್ ಮಿರಾಂದ, ಆಶಾ ಬಿ., ಶ್ರೀದೇವಿ ಪಿ., ಜ್ಯೋತಿ ಮಲ್ಯಾ, ಸುಬೋಧ್ ಕುಮಾರ್ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ವಿಭಾಗದ ಮುಖ್ಯಸ್ಥೆ ಭಾನುಕಲಾ ಉದಯ್ ಕಾರ್ಯಕ್ರಮ ನಿರೂಪಿಸಿದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಸುಕನ್ಯಾ ಕುಮಾರಿ ವಂದಿಸಿದರು.