ಮಂಜಲಕಟ್ಟೆ ಶ್ರೀ ಕೋರ‌್ದಬ್ಬು ದೈವಸ್ಥಾನ ಕಂಬೆರ್ಲಕಲದ ಪುನರ್ ಪ್ರತಿಷ್ಠೆ ನೇಮ

mng--14 Feb Manjalkatte
Published on

ಮಂಗಳೂರು: ಮಂಜಲಕಟ್ಟೆ ಶ್ರೀ ಕೋರ‌್ದಬ್ಬು ದೈವಸ್ಥಾನ ಕಾವೂರು ಇದರ ಕಂಬೆರ್ಲಕಲ ಜೀರ್ಣೋದ್ದಾರಗೊಂಡು ಪುನರ್ ಪ್ರತಿಷ್ಠೆ ಶುಕ್ರವಾರ ಬ್ರಹ್ಮ ಶ್ರೀ ವೇ. ಮೂ. ವಿಟ್ಠಲದಾಸ್ ತಂತ್ರಿ ದೇರೆಬೈಲು ಅವರ ಪೌರೋಹಿತ್ಯದಲ್ಲಿ ಜರಗಿತು.

ಬೆಳಗ್ಗೆ ಗಣಪತಿ ಹೋಮ ಶುದ್ಧ ದರ್ಶನ ಸೇವೆ, ಕಂಬೆರ್ಲಕಲದ ಸರ್ವ ದೈವ ದೇವರುಗಳ ಕಾರ್ಯ ನೆರವೇರಿತು. ಸಂಜೆ ಶ್ರೀಚಾಮುಂಡೇಶ್ವರಿ ಕ್ಷೇತ್ರ ದುಗ್ಗನಬೆಟ್ಟು ಶಾಂತಿನಗರದಿಂದ ಶ್ರೀ ಅಭಿಮನ್ಯು ್ರೆಂಡ್ಸ್ ಸರ್ಕಲ್ ಮುಲ್ಲಕಾಡು ಹಾಗೂ ಗ್ರಾಮದ ಹತ್ತು ಸಮಸ್ತರ ದೇಣಿಗೆಯಿಂದ ದೈವಕ್ಕೆ ಸಮರ್ಪಣೆ ಮಾಡುವ ಬೆಳ್ಳಿಯ ಅಣಿ ಮತ್ತು ಜಕ್ಕೆಲ್ ಅಣಿಯನ್ನು ಭವ್ಯ ಮೆರವಣಿಗೆಯಲ್ಲಿ ತಂದು ಶ್ರೀ ಕೋರ‌್ದಬ್ಬು ದೈವಕ್ಕೆ ಒಪ್ಪಿಸಲಾಯಿತು.

ಈ ಸಂದರ್ಭ ಶಾಸಕ ಡಾ.ವೈ. ಭರತ್ ಶೆಟ್ಟಿ , ಮನಪಾ ಸದಸ್ಯೆ ಗಾಯತ್ರಿ ರಾವ್ , ಅಜಿತ್ ಕುಮಾರ್ ರೈ ಮಾಲಾಡಿ, ಸಮಿತಿಯ ಪ್ರಮುಖರಾದ ಗಿರಿಜಾತೆ ಆರ್ ಭಂಡಾರಿ ದೆಪ್ಪುಣಿಗುತ್ತು, ಕಾವೂರುಗುತ್ತು ಸುಧಾಕರ್ ಶೆಟ್ಟಿ, ಮಮತಾ ಡಿ ಶೆಟ್ಟಿ ಕಾವೂರುಗುತ್ತು , ಶಂಕರ ಶೆಟ್ಟಿ ನಂದನಕೆರೆ , ಶ್ರೀನಿವಾಸ್ ದುಗ್ಗಣಮನೆ, ಭರತ್ ಅಡಪ, , ಶ್ರೀಧರ್ ಎಂ., ಪುರುಷೋತ್ತಮ ಎನ್ ಪೂಜಾರಿ, ಶೇಖರ್ ಕುಲಾಲ್, ಮಂಜುನಾಥ್ ಪ್ರಭು, ಪುಷ್ಪರಾಜ್ ಮೊಲಿ , ಪುರುಷೋತ್ತಮ, ಸದಾನಂದ ಪೂಜಾರಿ ಗಟ್ಟೆಮನೆ ಮೊದಲಾದವರು ಉಪಸ್ಥಿತರಿದ್ದರು.

ಇಂದು ಶ್ರೀ ಕೋರ‌್ದಬ್ಬು ನೇಮ

ೆ. 15 ರಂದು ಬೆಳಗ್ಗೆ 9ಕ್ಕೆ ಭಂಡಾರ ಏರುವುದು, ರಾತ್ರಿ 8ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಕೋರ‌್ದಬ್ಬು ನೇಮ ಹಾಗೂ ತನ್ನಿಮಾನಿಗ ನೇಮ ನಡೆಯಲಿದೆ. ೆ. 16ರಂದು ಮಧ್ಯಾಹ್ನ 12 ಗಂಟೆಗೆ ರಾಹುಗುಳಿಗ ನೇಮ, ಎಣ್ಣೆಬೂಲ್ಯ, 1ಕ್ಕೆ ಗಗ್ಗರ ಸೇವೆ, ರಾತ್ರಿ 8ಕ್ಕೆ ಗುಳಿಗ ಪಂಜುರ್ಲಿ ದೈವದ ನೇಮ, ಗಡುಜಾಗಕ್ಕೆ ಮಾರಿಬಲಿ ಹೊರಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net