

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕಾವೂರು ಶ್ರೇಯಾ ಕಾಂಪ್ಲೆಕ್ಸ್‌ನಲ್ಲಿ ‘ಹೊಟೇಲ್ ಸಾಮ್ರಾಟ್ ಇನ್’ ವೆಜ್ ಆಂಡ್ ನಾನ್‌ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಸೋಮವಾರ ಅಧಿಕೃತವಾಗಿ ಶುಭಾರಂಭಗೊಂಡಿತು.
ಹೊಟೇಲ್‌ನಲ್ಲಿ ಐದು ದಿನ ಆಹಾರ ತಯಾರಿ ಪೂರ್ವಸಿದ್ಧತೆಗಳು ನಡೆಯಲಿದ್ದು, ನವೆಂಬರ್ 23 ರಿಂದ ಗ್ರಾಹಕರ ಸೇವೆಗೆ ಹೊಟೇಲ್ ಲಭ್ಯವಾಗಲಿದೆ.
ಗ್ರಾಹಕರ ಸಂತೃಪ್ತಿ ಮುಖ್ಯ
ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಹೇರಂಭ ಇಂಡಸ್ಟ್ರೀಸ್ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಅವರು, ಉದ್ಯಮದಲ್ಲಿ ಗ್ರಾಹಕರ ಸಂತೃಪ್ತಿಯೇ ಮುಖ್ಯ. ಇದು ಸಾಧ್ಯವಾದರೆ ವ್ಯಾಪಾರ ಸಹಜವಾಗಿಯೇ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಹೊಟೇಲ್ ಲಕ್ಷೃ ವಹಿಸಿದೆ. ಆದ್ದರಿಂದ ಉದ್ಘಾಟನೆಗೊಳ್ಳುತ್ತಿರುವ ಹೊಟೇಲ್ ಗ್ರಾಹಕರ ವಿಶ್ವಾಸ, ಪ್ರೀತಿ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಂದರ ತಾಣ
ಮುಖ್ಯ ಅತಿಥಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ನಗರದ ಪ್ರತಿಷ್ಠಿತ ವಿಮಾನ ನಿಲ್ದಾಣ ರಸ್ತೆಯ ಸುಂದರ ಪ್ರಾಕೃತಿಕ ತಾಣದಲ್ಲಿ ಆರಂಭಗೊಂಡಿರುವ ಉನ್ನತ ದರ್ಜೆಯ ಹೊಟೇಲ್‌ನಿಂದ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ದೇಶ- ವಿದೇಶಗಳ ಜನರ ಜತೆ, ಸ್ಥಳೀಯರಿಗೆ ಕೂಡ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗುಣಮಟ್ಟ, ಸೇವೆಗೆ ಆದ್ಯತೆ
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಗುಣಮಟ್ಟ ಹಾಗೂ ಉತ್ತಮ ಸೇವೆಗೆ ಹೊಸ ಹೊಟೇಲ್ ಮಾಲೀಕರು ಆದ್ಯತೆ ನೀಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಮೇಯರ್ ಮನೋಜ್ ಕುಮಾರ್, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಟಿ.ಪ್ರವೀಣ್‌ಚಂದ್ರ ಆಳ್ವ, ಸದಸ್ಯ ಲೋಹಿತ್ ಅಮೀನ್, ಸೂರಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ರೇವಣ್ಕರ್, ಉದ್ಯಮಿ ಶಶಿಧರ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ, ಸಾಕ್ಷಾತ್ ಶೆಟ್ಟಿ, ಬಾಳಪ್ಪ ಶೆಟ್ಟಿ ಮುಂತಾದವರು ಶುಭ ಹಾರೈಸಿದರು.
ಹೊಟೇಲ್ ಆಡಳಿತ ಪಾಲುದಾರರಾದ ಅರುಣ್ ಕುಮಾರ್ ಶೆಟ್ಟಿ ಮಂಚಿ ಮತ್ತು ಮಮತಾ ಶೆಟ್ಟಿ ಉಪಸ್ಥಿತರಿದ್ದರು.
---------
ವೈವಿಧ್ಯಮಯ ಖಾದ್ಯ
ನೂತನ ಹೊಟೇಲ್‌ನಲ್ಲಿ ಎಸಿ/ ನೋನ್ ಎಸಿ ಪ್ರತ್ಯೇಕ ವ್ಯವಸ್ಥೆಗಳಿದ್ದು, ದಕ್ಷಿಣ ಭಾರತ, ಚೈನೀಸ್, ಉತ್ತರ ಭಾರತದ ವೈವಿಧ್ಯಮಯ ಖಾದ್ಯ, ಇತರ ಆಹಾರಗಳು ದೊರೆಯಲಿವೆ. ಹೊರ ಭಾಗದ ಜನರಿಗೆ ಮಂಗಳೂರು ಶೈಲಿಯ ಆಹಾರದ ವಿಶೇಷತೆಯನ್ನು ಹೊಟೇಲ್ ಪರಿಚಯಿಸಲಿದೆ.