ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘ ಬೆಳ್ಳಿ ಹಬ್ಬದ ವಿಜ್ಞಾಪನೆ ಪತ್ರ ಬಿಡುಗಡೆ

mng--21 Oct Karada
Published on

ಮಂಗಳೂರು: ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘ ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ವಿಜ್ಞಾಪನಾ ಪತ್ರದ ಬಿಡುಗಡೆ ಭಾನುವಾರ ಶಕ್ತಿನಗರದ ಕರ‌್ಹಾಡ ಭವನದಲ್ಲಿ ನಡೆಯಿತು.

ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ಗೌರವಾಧ್ಯಕ್ಷ ವೇದಮೂರ್ತಿ ವಿದ್ಯಾಶಂಕರ್ ಅಂಬೇಕರ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸಮಾಜ ಬಾಂಧವರ ಸಹಕಾರ ಕೋರಿದರು. ಅಲ್ಲದೆ ನಿಧಿ ಸಂಚಯನದ ಮೂಲಕ ವಿದ್ಯುಕ್ತವಾಗಿ ಬೆಳ್ಳಿಹಬ್ಬದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಶಿವಶಂಕರ ಭಟ್ ಕನ್ನಡ್ಕ ಮಾತನಾಡಿ, ಮುಂದಿನ ಜನವರಿ ತಿಂಗಳಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ. ಮಂಗಳೂರು ಪರಿಸರದಲ್ಲಿ ವಾಸ್ತವ್ಯದಲ್ಲಿರುವ ಎಲ್ಲ ಕರ‌್ಹಾಡ ಬ್ರಾಹ್ಮಣ ಸಮಾಜ ಬಾಂಧವರು ಸಂಘದ ಸದಸ್ಯರಾಗುವ ಜತೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಪೂರ್ಣರೂಪದಲ್ಲಿ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಸಂಘದ ಬೆಳ್ಳಿಹಬ್ಬ ಕಾರ್ಯಕ್ರಮ ಪ್ರಯುಕ್ತ ಶಕ್ತಿನಗರದ ಕರ‌್ಹಾಡ ಭವನದಲ್ಲಿ ಗಾಯತ್ರಿ ಯಜ್ಞ ಹಾಗೂ ಶಕ್ತಿನಗರ ಶಾಲಾ ಮೈದಾನದಲ್ಲಿ ಸಮಾಜ ಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲು ನಿರ್ಧರಿಸಲಾಯಿತು. ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ಕಾರ್ಯದರ್ಶಿ ಜಯರಾಮ್ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net