

ಮಂಗಳೂರು: ಹಳೇ ವಿದ್ಯಾರ್ಥಿ ಸಂಘ, ದ.ಕ.ಜಿ.ಪಂ. ಪ್ರಾಥಮಿಕ ಶಾಲೆ ಕರಂಬಾರು ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ , ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗುಣಪಾಲ ದೇವಾಡಿಗ ಉದ್ಘಾಟಿಸಿದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ಅಧಿಕಾರಿ ಶಿವಣ್ಣ ವಿ.ಯಂ, ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಶೈಲಜಾ ರಾಜೇಶ್, ಹಳೆ ವಿದ್ಯಾರ್ಥಿ ಅಧ್ಯಕ್ಷ ಸತೀಶ್ ದೇವಾಡಿಗ, ಮಳವೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಪ್ರಿತಾ ಶೆಟ್ಟಿ, ದ.ಕ ಫ್ಲವರ್ ಡೆಕೋರೇಟರ್ಸ್ ಮಾಲೀಕರ ಸಂಘದ ಅಧ್ಯಕ್ಷ ತುಷಾರ್ ಸುರೇಶ್, ಶ್ರೀ.ಕ್ಷೇ.ಧ.ಗ್ರಾ.ಯೋ ಟ್ರಸ್ಟ್ ನ ಮೇಲ್ವಿಚಾರಕಿ ಪ್ರೇಮಲತಾ, ಕರಂಬಾರು ಶಾಲೆಯ ಮುಖ್ಯ ಶಿಕ್ಷಕಿ ಉಷಾಕಿರಣ, ಮಳವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ, ರಾಘವೇಂದ್ರ ಎಸ್, ಲೋಕೇಶ್ ಎಂ. ಬಿ, ಯಶವಂತ್ ವಿ, ಜಯೇಶ್ ಬರೆಟ್ಟೋ ಉಪಸ್ಥಿತರಿದ್ದರು.
ನಿತೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ವಿಶ್ವನಾಥ್ ದೇವಾಡಿಗ ಸ್ವಾಗತಿಸಿ, ಗೀತಾ. ಎಂ. ಪ್ರಸ್ತಾವನೆಗೈದರು, ಮಾಧವ ಅಮೀನ್ ವಂದಿಸಿದರು.