ಕಾಪು ಕ್ಷೇತ್ರಕ್ಕೆ ದಕ್ಷಿಣ ವಾಹಿನಿ ಹೊರೆಕಾಣಿಕೆ 22ರಂದು ನಡೆಯಲಿರುವ ಮೆರವಣಿಗೆ - ವಲಯ, ಗ್ರಾಮ ಸಮಿತಿಗಳ ರಚನೆ

kapu
Published on

ಮಂಗಳೂರು: ಕಾವು ಶ್ರೀ ಹೊಸಮಾರಿಗುಡಿ ಶ್ರೀ ಮಾರಿಯಮ್ಮನ ಪುನಃಪ್ರತಿಷ್ಠಾಪನಾ ಸಹಸ್ರ ಕುಂಭಾಭಿಷೇಕ ಅಂಗವಾಗಿ ದಕ್ಷಿಣ ವಾಹಿನಿ (ದಕ್ಷಿಣ ಕನ್ನಡ ಜಿಲ್ಲೆ) ಹಸಿರುವಾಣಿ ಹೊರೆಕಾಣಿಕೆ ಫೆ.22ರಂದು ಆಯೋಜಿಸಲಾಗಿದೆ. ಬ್ರಹ್ಮಕಲಶೋತ್ಸವ ಹಾಗೂ ಹೊರೆಕಾಣಿಕೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸೋಣ ಎಂದು ಹಸಿರುವಾಣಿ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳವು ಹೇಳಿದರು.

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಅಮೃತೋತ್ಸವ ಕಟ್ಟಡದ ಸಬಾಂಗಣದಲ್ಲಿ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಮುಖಂಡ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ ಮಾತನಾಡಿ, ತುಳುನಾಡಿನಲ್ಲಿ ಜನಿಸಿದ ನಾವೆಲ್ಲರೂ ಪುಣ್ಯಾತ್ಮರು. ಕಾಪು ಶ್ರೀಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲರೂ ಭಾಗಿಯಾಗೋಣ. ಆ ಪುಣ್ಯ ಕಾರ್ಯಕ್ರಮದಲ್ಲಿ ನಮ್ಮಿಂದ ಯಾವ ರೀತಿ ಸೇವೆ ಮಾಡಲು ಸಾಧ್ಯವೋ ಆ ರೀತಿ ತೊಡಗಿಸಿಕೊಳ್ಳೋಣ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ಮಾತನಾಡಿ, ಹೊರೆಕಾಣಿಕೆಗೆ ಸಂಬಂಧಪಟ್ಟಂತೆ ಆಯಾಯ ತಾಲೂಕು, ವಲಯ, ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಹೊರೆಕಾಣಿಕೆ ಸಮರ್ಪಣೆ ಮಾಡಬಹುದಾದ ವಸ್ತುಗಳ ಪಟ್ಟಿಯನ್ನು ಈಗಾಗಲೇ ನೀಡಲಾಗಿದೆ. ಅದರಂತೆ ಭಕ್ತಾದಿಗಳು ಹೊರೆ ಕಾಣಿಕೆ ನೀಡಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.

ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಗಂಗಾಧರ ಸುವರ್ಣ, ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ ಪಣಿಯೂರು, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಕೆ.ಟಿ. ಸುವರ್ಣ, ಗೀತಾಂಜಲಿ ಸುವರ್ಣ, ಯಾದವ ಕೋಟ್ಯಾನ್ ಪೆರ್ಮುದೆ, ಪ್ರಕಾಶ್, ಚಿತ್ತರಂಜನ್ ಭಂಡಾರಿ ಐಕಳ ಬಾವ, ಶೆಡ್ಡೆ ಸಂತೋಷ್ ಶೆಟ್ಟಿ, ದೀಕ್ಷಿತ್ ಭಂಡಾರಿ ಉಳ್ಳಾಲಗುತ್ತು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net