ಮಾನವೀಯತೆ ಮೆರೆದ ಮಹಿಳಾ ಕಾನ್‌ಸ್ಟೇಬಲ್ ಮನ್‌ಶಿದಾ ಬಾನು ಅವರಿಗೆ ಸನ್ಮಾನ

mng--24 Oct kadri sanmana
Published on

ಮಂಗಳೂರು: ಕೆಪಿಟಿ ವೃತ್ತದ ಬಳಿ ಬುಧವಾರ ಬೆಳಗ್ಗಿನ ಜಾವ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ಸ್ಕೂಟರ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ಮನ್‌ಶಿದಾ ಬಾನು ಅವರನ್ನು ಗುರುವಾರ ಸನ್ಮಾನಿಸಲಾಯಿತು.

ಮಂಜುಳಾ ನಾಯಕ್ ನೇತೃತ್ವದ ಸಾಮರಸ್ಯ ವೇದಿಕೆ ವತಿಯಿಂದ ನಡೆದ ಸನ್ಮಾನ ಸಂದರ್ಭ ಶ್ರೀನಿವಾಸ ಸಾಲ್ಯಾನ್, ಚಂಚಲಾಕ್ಷಿ, ಸಿಂತಿಯಾ ಮಿರಾಂದ, ಮಮತಾ ಶೆಟ್ಟಿ, ನೀನಾ ಟೆಲ್ಲಿಸ್, ಡಿ.ಸಿ.ರಚನಾ, ಯೋಗೀಶ್ ನಾಯಕ್, ಪಿಎಸ್‌ಐ ಉಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net