ಆ.31ರಿಂದ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್’ ಸೀಸನ್- 2

ooooooooooooooooo
Published on


ಮಂಗಳೂರು : ವಿ ಆರ್ ಯುನೈಟೆಡ್ ವತಿಯಿಂದ ‘ಶ್ೆ ಟಾಕ್ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್’ ಸೀಸನ್- 2 ಆ.30,31 ಮತ್ತು ಸೆ.1ರಂದು ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ
ಕಳೆದ ವರ್ಷ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್-1 ಯಶಸ್ವಿಯಾಗಿ ನಡೆದಿದೆ. ಈ ವರ್ಷ ಗೌರವ ಅಧ್ಯಕ್ಷ ಪ್ರಕಾಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಜತೆಗೆ, ಆಹಾರೋತ್ಸವ ಮತ್ತು ವಿನೋದ ಮೇಳ ಕೂಡಾ ಆಯೋಜಿಸಲಾಗಿದೆ ಎಂದು ವಿಆರ್ ಯುನೈಟೆಡ್‌ನ ಕೋಶಾಧಿಕಾರಿ ಸುದೇಶ್ ಭಂಡಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.30ರಂದು ಸಾಯಂಕಾಲ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆಹಾರೋತ್ಸವ ಉದ್ಘಾಟಿಸಲಿದ್ದು, ಆ.31ರಂದು ಕಬಡ್ಡಿ ಪಂದ್ಯಾಟವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ಸೆ.1ರಂದು ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಅವರಿಗೆ ಮಂಗಳೂರು ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ , ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕನ್ಯಾನ, ಗೋವಿಂದ ಬಿ.ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಬಡ್ಡಿ ಪಂದ್ಯಾಟದಲ್ಲಿ ಅಸ್ತಾ ಬ್ರಿಗೇಡ್ಸ್, ಲ್ೈ ಲೈನ್ಸ್ ಾಲ್ಕನ್ಸ್, ಟೀಮ್ ಬಾವ, ಯು ಕುಂಜತ್ತೂರು,ಮಂಗಳೂರು ಯುನೈಟೆಡ್ ಕಬಡ್ಡಿ ಕ್ಲಬ್, ಪ್ರಕಾಶ್ ಕುಂಪಲ ವಾರಿಯರ್ಸ್, ಕರ್ನಾಟಕ ತುಳುವಾಸ್ ನೈಜೀರಿಯಾ ಮತ್ತು ನ್ಯೂಸ್ಟಾರ್ ಮಂಗಳೂರು ತಂಡಗಳು
ಭಾಗವಹಿಸಲಿವೆ. ತಂಡಗಳ ಆಟಗಾರರನ್ನು ಆ.20ರಂದು ಹರಾಜು ಮೂಲಕ ಆಯ್ಕೆ ಮಾಡಲಾಗಿತ್ತು, ಒಟ್ಟು 99 ಆಟಗಾರರು ಆಯ್ಕೆಯಾಗಿದ್ದಾರೆ ಎಂದು ಅವರು ವಿವರ ನೀಡಿದರು.
ವಿ ಆರ್ ಯುನೈಟೆಡ್‌ನ ಅಧ್ಯಕ್ಷ ಅಸ್ಪರ್ ರಝಾಕ್, ಹರೀಶ್ ನಾಯಕ್, ವಿಶ್ವಾಸ್‌ಕುಮಾರ್ ದಾಸ್, ಎಂ.ಎಚ್. ಕರುಣಾಕರ, ಮೊಯಿದ್ದೀನ್ ಬಾವ, ಹಮೀದ್ ಅಮ್ಮಿ, ವಿನೋದ್ ಶೆಟ್ಟಿ, ದೀಪಕ್ ಪಿಲಾರ್, ಸುಕೇಶ್ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net