ಜಂಕ್ಷನ್ ರೈಲು ನಿಲ್ದಾಣ 3.16 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ

mng--10 Aug junction railu ganja
Published on

ಮಂಗಳೂರು: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಎರಡನೇ ್ಲ್ಯಾಟ್ ಾರಂನಲ್ಲಿ ಗುರುವಾರ ಬೆಳಗ್ಗೆ 11.15ರ ವೇಳೆಗೆ ಕಾರವಾರ-ಯಶವಂತಪುರ (ನಂ.16516) ಎಕ್ಸ್‌ಪ್ರೆಸ್ ರೈಲಿನಲ್ಲಿ 3,16,650 ರೂ. ಮೌಲ್ಯದ 6.333 ಕೆ.ಜಿ ತೂಕದ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.


ರೈಲಿನ ನಿಯಮಿತ ತಪಾಸಣೆ ವೇಳೆ ಪತ್ತೆಯಾದ ಅನಾಮಧೇಯ ಬ್ಯಾಗ್‌ನಲ್ಲಿ ಗಾಂಜಾ ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


ಕಾರ್ಯಾಚರಣೆಯಲ್ಲಿ ಪಾಲ್ಘಾಟ್ ವಿಭಾಗದ ಸಿಐಬಿ ಮುಖ್ಯ ನಿರೀಕ್ಷಕ ಎನ್.ಕೇಸವದಾಸ್, ಮಂಗಳೂರು ಜಂಕ್ಷನ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ಯಾದವ್, ಸಿಐಬಿ ಎಸ್‌ಐ ದೀಪಕ್ ಎ.ಪಿ., ಅಜಿತ್ ಅಶೋಕ್ ಎ.ಪಿ, ಎಎಸ್‌ಐ ಸಾಜು ಕೆ., ಎಸ್.ಎಂ. ರವಿ., ಮಂಗಳೂರು ಜಕ್ಷನ್ ಎಎಸ್‌ಐ ಕೆ.ಶಶಿ, ಸಿಐಬಿ ಹೆಡ್ ಕಾನ್‌ಸ್ಟೇಬಲ್ ಎನ್.ಅಶೋಕ್, ಅಜೀಶ್ ಒ.ಕೆ., ಜಂಕ್ಷನ್ ಕಾನ್‌ಸ್ಟೇಬಲ್ ಟಿ.ಪಾಂಡುರಂಗ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net