

ಮಂಗಳೂರು: ಸುಳ್ಯ ತಾಲೂಕು ಬೇಂಗಮಲೆ ಸಮೀಪದ ಖಂಡಿಗೆಮೂಲೆ ನಿವಾಸಿ ಜಯರಾಮ ಪಿ.ಜಿ. (44) ಬುಧವಾರ ಹೃದಯಾಘಾತದಿಂದ ನಿಧನರಾದರು.
ಎದೆನೋವು ಕಾಣಿಸಿಕೊಂಡ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಅವರು ಕುಟುಂಬದ ಜತೆ ಇರುವ ಉದ್ದೇಶದಿಂದ ಕೆಲಸ ಬಿಟ್ಟು ಊರಿಗೆ ತೆರಳಿ ನೆಲೆಸಿದ್ದರು.
ಮೃತರು ತಾಯಿ, ಸಹೋದರ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.