ಮಂಗಳೂರು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಕಾರ್ಗೋ ಸೇವೆ ಆರಂಭ

mng--7 july Airport cargo
Published on

ಮಂಗಳೂರು: ಬಹು ಕಾಲದ ಬೇಡಿಕೆಯಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಕಾರ್ಗೋ (ಸರಕು) ಸಾಗಾಟ ಆರಂಭಗೊಂಡಿದ್ದು, ಈ ಮೂಲಕ ಕರಾವಳಿ ಭಾಗದ ರಫ್ತುದಾರರಲ್ಲಿ ಹೊಸ ಆಶಾವಾದ ಮೂಡಿಸಿದೆ.


ಜು.2ರಂದು ಮಂಗಳೂರಿನಿಂದ ಅಬುಧಾಬಿಗೆ 2522 ಕಿ.ಗ್ರಾಂ. ತರಕಾರಿ ಹಾಗೂ ಹಣ್ಣು ಹಂಪಲನ್ನು ಸಾಗಾಟ ಮಾಡುವ ಮೂಲಕ ಮೊದಲ ಅಂತಾರಾಷ್ಟ್ರೀಯ ಕಾರ್ಗೋ ಸಾಗಾಟ ಆರಂಭವಾಗಿದೆ. ಜು.5ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕಾರ್ಗೋ ಸಾಗಾಟಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.


ಇನ್ನು ಮುಂದೆ ದಕ್ಷಿಣ ಕನ್ನಡ, ಉಡುಪಿ, ಕೇರಳ ಸಹಿತ ವಿವಿಧ ಭಾಗದಿಂದ ಸರಕನ್ನು ಮಂಗಳೂರು ಏರ್‌ಪೋರ್ಟ್ ಮೂಲಕ ವಿದೇಶಗಳಿಗೆ ಸಾಗಾಟ ನಡೆಸಬಹುದು. ತರಕಾರಿ, ಹಣ್ಣು ಹಂಪಲು, ಆಹಾರ ವಸ್ತುಗಳು, ಯಂತ್ರೋಪಕರಣದ ಬಿಡಿ ಭಾಗಗಳು, ಟೆಕ್ಸ್‌ಟೈಲ್ಸ್, ಮೀನು ಸಹಿತ ವಿವಿಧ ವಸ್ತುಗಳನ್ನು ಪ್ರಯಾಣಿಕರು ಸಂಚರಿಸುವ ವಿಮಾನದಲ್ಲೇ ಕೊಂಡೊಯ್ಯಲಾಗುತ್ತದೆ.ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬಾ, ದೋಹಾ, ದಮಾಮ್, ಕುಮೈಟ್, ಮಸ್ಕತ್, ಅಬುಧಾಬಿ ಹಾಗೂ ಬಹರೈನ್‌ಗೆ ಕೊಂಡೊಯ್ಯಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net