ಅಂ.ರಾ. ವಿಮಾನ ನಿಲ್ದಾಣ 1,676.21 ಟನ್ ದೇಶೀಯ ಸರಕು ನಿರ್ವಹಣೆ

IXE_Cargo_Oct03A
Published on

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ದೇಶೀಯ ಸರಕುಗಳ ನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಈ ವರ್ಷದ ಮೇ 1 ರಂದು ಉದ್ಘಾಟನೆಗೊಂಡಾಗಿನಿಂದ ಸೆಪ್ಟೆಂಬರ್ 30ರ ವರೆಗೆ ಟರ್ಮಿನಲ್ 1,676.21 ಟನ್ ದೇಶೀಯ ಸರಕುಗಳನ್ನು ನಿರ್ವಹಿಸಿದೆ. ಒಟ್ಟು ಸರಕುಗಳಲ್ಲಿ ಐಸಿಟಿ 1,560.23 ಟನ್ ಹೊರಹೋಗುವ ಸರಕುಗಳನ್ನು ನಿರ್ವಹಿಸಿದೆ ಮತ್ತು ಉಳಿದವು ಒಳಬರುವ ಸರಕುಗಳಾಗಿವೆ.


ಅಂಚೆ ಕಚೇರಿ ಮೇಲ್ ಹೊರಹೋಗುವ ಸರಕುಗಳು ಬಹುಪಾಲು ಪ್ರಾಬಲ್ಯ ಹೊಂದಿದೆ. ಸಾಮಾನ್ಯ ಸರಕು, ಬೆಲೆಬಾಳುವ ವಸ್ತುಗಳು, ಸಮುದ್ರ ಉತ್ಪನ್ನಗಳು, ಅಲಂಕಾರಿಕ ಮೀನುಗಳು ಕೂಡ ನಿರ್ವಹಿಸಲ್ಪಡುತ್ತದೆ. ಮತ್ತೊಂದೆಡೆ ಒಳಬರುವ ಸರಕು ಅಂಚೆ ಕಚೇರಿ ಮೇಲ್, ಬೆಲೆಬಾಳುವ ವಸ್ತುಗಳು, ಯಂತ್ರೋಪಕರಣಗಳ ಭಾಗಗಳು, ವೈದ್ಯಕೀಯ ಸರಬರಾಜುಗಳು, ವೈದ್ಯಕೀಯ ಉಪಕರಣಗಳು ಕೂಡ ಸರಕು ನಿರ್ವಹಣೆಯಲ್ಲಿ ಒಳಗೊಂಡಿದೆ.
ಹಣ್ಣು ಮತ್ತು ತರಕಾರಿಗಳ ಪಾರ್ಸೆಲ್‌ಗಳನ್ನೂ ನಿರ್ವಹಿಸಲಾಗಿದೆ. ಸ್ಥಳೀಯ ಸಾಗರ ಉತ್ಪನ್ನ ರಫ್ತುದಾರರು ತಮ್ಮ ಉತ್ಪನ್ನಗಳನ್ನು ಸಾಗರೋತ್ತರ ಗ್ರಾಹಕರಿಗೆ ತಲುಪಿಸಲು ಐಸಿಟಿಯನ್ನು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಸಮುದ್ರ ಉತ್ಪನ್ನಗಳನ್ನು ಮತ್ತು ವಿಶೇಷವಾಗಿ ಏಡಿಗಳನ್ನು ಕೋಲ್ಕತ್ತಾ ಮೂಲಕ ಚೀನಾಕ್ಕೆ ಸಾಗಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net