ಇಂಡಿಯಾನಾ ಆಸ್ಪತ್ರೆ ಎಂದರೆ ನಂಬಿಕೆ ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಉದ್ಘಾಟಿಸಿ ಸಚಿವ ದಿನೇಶ್ ಗುಂಡುರಾವ್

DCO_6916
Published on

ಮಂಗಳೂರು: ಇಂಡಿಯಾನಾ ಆಸ್ಪತ್ರೆ ಎಂದರೆ ನಂಬಿಕೆ, ಈ ನಂಬಿಕೆಯಿಂದಲೇ ಇಂದು ಈ ಸಂಸ್ಥೆ ದೇಶದಲ್ಲೇ ಹೆಸರುವಾಸಿಯಾಗಿದೆ. ದೇಶದಲ್ಲಿ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಬೇಡಿಕೆಯಿದ್ದು, ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಇದಕ್ಕೆಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಈಗ ಕರ್ನಾಟಕ ಮತ್ತು ಉತ್ತರ ಕೇರಳಾದ್ಯಂತ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಆರಂಭಿಸಿರುವುದು ಈ ಸಂಸ್ಥೆಯ ಯಶಸ್ಸಿಗೆ ಕಾರಣ ಎಂದು ಆರೋಗ್ಯ ಸಚೀವ ದಿನೇಶ್ ಗುಂಡುರಾವ್ ಹೇಳಿದರು.

ಶುಕ್ರವಾರ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ನೂತನ ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಉದ್ಘಾಟಿಸಿ ಮಾತನಾಡಿದರು.

ಮಂಗಳೂರಿಗೆ ಬಂದು 2011ರಲ್ಲಿ ಆರಂಬಿಸಿ ಹೆಚ್ಚು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದೆವು.ಅಲ್ಲಿಂದ ಹಂತ ಹಂತವಾಗಿ ಬೆಳೆಯಲಾರಂಭಿಸಿದೆವು. ಈ ಸಣ್ಣ ಸಮಾರಂಭವಾದರೂ ಸಚಿವರು ಅಗಮಿಸಿರುವುದು ಖುಷಿಯ ವಿಚಾರ. ಭಾರತ ಕ್ಯಾನ್ಸರ್ ಕೈಸಿಸ್ ಎದುರಿಸುತ್ತಿದೆ. ಸರಿಯಾಗಿ ಚಿಕಿತ್ಸೆ ಇಲ್ಲದೆ ಇಂದು 1.2 ಮಿಲಿಯನ್ ಜನ ಪ್ರತೀ ವರ್ಷ ಮೃತಪಡುತ್ತಿದ್ಸಾರೆ. ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ಗೆ ಡೇ ಕೇರ್ ಕಿಮೋ ಸೆಂಟರ್ ಆರಂಭಿಸಲಾಗುವುದು. ಮುಂದಿನ ತಿಂಗಳಲ್ಲಿ ಜಾರಿಗೊಳ್ಳಲಿದೆ. ನಿತ್ಯ ಹೊಸ ತನದತ್ತ ಅನ್ವೇಷಣೆ ಮಾಡಲಾಗುತ್ತಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖನಾಗಲು ಸಾಧ್ಯ. ವಿಜ್ಞಾನ ಬೆಳೆದಂತೆ ಎಲ್ಲಾ ಅಪ ನಂಬಿಕೆಗಳು ದೂರವಾಗಿವೆ. ಖಾಸಗಿ ಸರ್ಕಾರಿ ಸಹಭಾಗಿತ್ವದೊಂದಿಗೆ ಜತೆಯಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು.

ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆಯು ಗಮನಾರ್ಹ ಪ್ರಗತಿ ಕಂಡಿದೆ. ಇಂಡಿಯಾನಾ ಕ್ಯಾನ್ಸರ್ ಕೇಂದ್ರ ಮಂಗಳೂರಿನಲ್ಲಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ವಿಶ್ವ ದರ್ಜೆಯ ಕೈಗೆಟುಕುವ ಕ್ಯಾನ್ಸರ್ ಆರೈಕೆ ನೀಡುವ ಮೂಲಕ ಈ ಪ್ರದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಕೊರತೆ ನೀಗಲು ಪ್ರಯತ್ನಿಸಲಿದೆ. ಇಂಡಿಯಾನಾ ಕ್ಯಾನ್ಸರ್ ಕೇಂದ್ರದಲ್ಲಿ ಪ್ರತಿಷ್ಠಿತ ಕ್ಯಾನ್ಸರ್ ತಜ್ಞರ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಡಾ. ಯು.ಟಿ. ಇಫ್ತಿಕರ್ ಫರೀದ್, ಪಾಲಿಕೆ ಪ್ರತಿಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಆಸ್ಪತ್ರ ವೈದ್ಯರಾದ ಡಾ. ಆದಿತ್ಯ ವಿದ್ವರಾಜ್, ಡಾ. ಸಂಗೀತಾ ಕೆ., ಡಾ. ಅಪೂರ್ವ, ಇಂಡಿಯಾನಾ ಆಸ್ಪತ್ರೆ ಅಧ್ಯಕ್ಷ ಡಾ.ಅಲಿ ಕುಂಬ್ಳೆ, ಕ್ಯಾನ್ಸರ್ ಚಿಕಿತ್ಸಾ ತಜ್ಞರಾದ ಡಾ.ಅಜಯ್ ಕುಮಾರ್, ಡಾ.ರಾಮನಾಥ್ ಶೆಣೈ ಸಹಿತ ಹಲವರು ಉಪಸ್ಥಿತರಿದ್ದರು.

ಡಾ. ಅಲಿ ಕುಂಬ್ಳೆ ಸ್ವಾಗತಿಸಿದರು. ಮೆಡಿಕಲ್ ಆಂಕಾಲಜಿ ವಿಭಾಗದ ಡಾ. ರಮಾನಾಥ ಶೆಣೈ ವಂದಿಸಿದರು.

ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆಯು ಗಮನಾರ್ಹ ಪ್ರಗತಿಯನ್ನು ಕಂಡಿದೆ. ಇಂಡಿಯಾನಾ ಕ್ಯಾನ್ಸರ್ ಸೆಂಟರ್ ಅನ್ನು ವಿಶೇಷವಾದ, ಅಂಗ-ನಿರ್ದಿಷ್ಟ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಈ ಪ್ರಗತಿಗಳನ್ನು ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಪಂಚದಾದ್ಯಂತದ ಪ್ರಮುಖ ಕ್ಯಾನ್ಸರ್ ಕೇಂದ್ರಗಳಲ್ಲಿ ಈಗ ಪ್ರಮಾಣಿತವಾಗಿರುವ ಈ ವಿಧಾನವು ಪ್ರತಿ ರೋಗಿಯ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಡಾ.ಯೂಸುಫ್ ಕುಂಬ್ಳೆ

ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net