ದಕ್ಷಿಣ ಕನ್ನಡ ಸ್ವಾತಂತ್ರೃ ಸಕಲ ಸಿದ್ಧತೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ

mng-aug14- stadium
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ವಾತಂತ್ರೃ ದಿನಾಚರಣೆ ಗುರುವಾರ ಬೆಳಗ್ಗೆ ನೆಹರೂ ಮೈದಾನದಲ್ಲಿ ನಡೆಯಲಿದೆ. ವೇದಿಕೆ ಜೋಡಣೆ, ಧ್ವಜ ಸ್ತಂಭ ಶುಚಿ ಸೇರಿದಂತೆ ಪೂರಕ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣಗೈದ ಬಳಿಕ ಪರೇಡ್ ವೀಕ್ಷಿಸಿ ಗೌರವ ಸ್ವೀಕಾರ ಮಾಡುವರು. ಬಳಿಕ ಸ್ವಾತಂತ್ರೊೃೀತ್ಸವ ಸಂದೇಶ ನೀಡುವರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿರುವರು. ಶಾಲಾ ವಿದ್ಯಾರ್ಥಿಗಳಿಂದ ಕವಾಯತು, ನೃತ್ಯ ಕಾರ್ಯಕ್ರಮ ನಡೆಯಲಿದೆ.


ಅಲ್ಲಲ್ಲಿ ಸಿದ್ಧತೆ: ಆಟೋ ರಿಕ್ಷಾ, ಕಾರು ನಿಲ್ದಾಣಗಳಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ತನಕ ಅಲ್ಲಲ್ಲಿ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನಡೆಯುತ್ತದೆ. ಎಲ್ಲ ಕಡೆ ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಭರದಿಂದ ನಡೆದಿದೆ. ಶಾಲಾ- ಕಾಲೇಜುಗಳಲ್ಲಿ, ಗ್ರಾಮ, ತಾಲೂಕು ಪಂಚಾಯಿತಿಗಳಲ್ಲಿ ಧ್ವಜಕಟ್ಟೆ ಶುಚಿಗೊಳಿಸಿ ಸಿದ್ಧತೆ ನಡೆಸಲಾಗಿದೆ. ನಗರದ ಅಂಗಡಿಗಳಲ್ಲಿ ರಾಷ್ಟ್ರಧ್ವಜ, ತ್ರಿವರ್ಣ ಟೋಪಿ, ಬ್ಯಾಂಡ್, ಟಿ ಶರ್ಟ್‌ಗಳು ರಾರಾಜಿಸುತ್ತಿವೆ. ಯುವಕರು ವಾಹನಗಳಿಗೆ ಕಟ್ಟಲು ಧ್ವಜ ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.


ಕಟ್ಟೆಚ್ಚರ: ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ವಾಣಿಜ್ಯ ಸಮುಚ್ಚಯ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಾಂಬ್ ನಿಷ್ಕ್ರೀಯದಳ, ಶ್ವಾನದಳ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸಮುದ್ರದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net