

ಐಡಿಎ ಪುತ್ತೂರು ಶಾಖೆಯ ಪದಾಧಿಕಾರಿಗಳ ಪದಗ್ರಹಣ
ಪುತ್ತೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಇದರ ಪುತ್ತೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಪುತ್ತೂರು ಐಡಿಎ ಭವನದಲ್ಲಿ ನಡೆಯಿತು.
ಬಾಯಿ ಮತ್ತು ದವಡೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಮುರಲೀ ಮೋಹನ್ ಚೂಂತಾರು ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.
ಐಡಿಎ ಪುತ್ತೂರು ಶಾಖೆಯ ನೂತನ ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ ಅವರಿಗೆ ಡಾ.ರಾಜಾರಾಮ ಕೆ.ಬಿ ಪ್ರಮಾಣ ವಚನ ಬೋಧಿಸಿದರು
ಸಂಘದ ಕೇಂದ್ರ ಕೌನ್ಸಿಲ್ ಸದಸ್ಯ ಡಾ.ರಾಘವೇಂದ್ರ ಪಿದಮಲೆ, ಸಂಘದ ಕೋಶಾಧಿಕಾರಿ ಡಾ.ಚರಣ್ ಕಜೆ, ಪದಾಧಿಕಾರಿಗಳಾದ ಡಾ.ಎಲ್ ಕೃಷ್ಣ ಪ್ರಸಾದ್, ಡಾ.ಶ್ರೀ ಕೃಷ್ಣ ಭಟ್, ಡಾ.ಪ್ರಕಾಶ್ ಭಟ್, ಡಾ.ವಿಶು ಕುಮಾರ್, ಡಾ.ಮುರಳೀಧರ್ ರೈ, ಡಾ.ಶಿವಾನಂದ ಹೆಚ್ , ಡಾ.ಮುರಳೀಧರ್ ಭಟ್, ಡಾ.ರಿತೇಶ್ ಕೆ.ಬಿ., ಡಾ.ಶ್ರುತಿ ಹೆಗ್ಡೆ, ಡಾ.ವಾಣಿ ರಿತೇಶ್, ಡಾ.ಆಶಾ ಜಿ.ಕೆ, ಡಾ.ಗಣೇಶ್ ಚಿಂತನ್, ಡಾ.ಹರ್ಷ ಉಪಸ್ಥಿತರಿದ್ದರು.
ನಿಕಟಪೂರ್ವಾಧ್ಯಕ್ಷ ಡಾ. ಆಶಾ ಅಮಾನ್ ಕಲ್ಲು ಸ್ವಾಗತಿಸಿ, ಕಾರ್ಯದರ್ಶಿ ಡಾ.ಕೀರ್ತನ್ ಕಜೆ ವಂದಿಸಿದರು. ಡಾ.ದೀಪಾಲಿ ಡೋಂಗ್ರೆ ,ಡಾ.ರಮ್ಯಾ ಕಜೆ ಹಾಗೂ ಡಾ.ಅಮೃತ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಐಡಿಎ ಸದಸ್ಯರು ಮತ್ತು ಸದಸ್ಯರ ಕುಟುಂಬ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.