ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯದಲ್ಲಿ ಮಲಗಿದ ಐಎಎಸ್ ಅಧಿಕಾರಿ !

mng--27 Oct Manivannan
Published on


ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ಪಿ.ಮಣಿವಣ್ಣನ್ ಐಎಎಸ್ ಇವರು ಕದ್ರಿ ಪಾರ್ಕ್ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಲಗಿ ಅಲ್ಲಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿ, ಸರಳತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಭೇಟಿಯಲ್ಲಿದ್ದ ಅವರು ಗುರುವಾರ ರಾತ್ರಿ 9.30 ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಸರ್ಕೀಟ್ ಹೌಸ್‌ನಲ್ಲಿ ಬುಕಿಂಗ್ ಆಗಿದ್ದ ರೂಮನ್ನು ತ್ಯಜಿಸಿ ನೇರವಾಗಿ ಸಮೀಪದಲ್ಲೇ ಇರುವ ತಮ್ಮ ಅಧೀನದ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಮಲಗಿದ್ದಾರೆ. ಬೆಳಗ್ಗೆ ರೈಲಿನಲ್ಲಿ ಬಂದು ನೆಟ್ಟಣ ನಿಲ್ದಾಣದಲ್ಲಿ ಇಳಿದು ಸುಳ್ಯ, ಸುಬ್ರಹ್ಮಣ್ಯ ಬಳಿಯ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳಿಗೆ ಭೇಟಿ ನೀಡುವವರಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅದು ಭೇಟಿ ಮೊಟಕುಗೊಳಿಸಿದ್ದರು.

ಸಂಜೆ ವೇಳೆ ವಿಮಾನದ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಾಗೂ ನ್ಯಾಯಾಲಯದಲ್ಲಿ ನಡೆಯುವ ಕಲಾಪದಲ್ಲಿ ಭಾಗವಹಿಸಲಿದ್ದಾರೆ. ಸರಳ ವ್ಯಕ್ತಿತ್ವದ ಐಎಎಸ್ ಅಧಿಕಾರಿ ಜನಮನ್ನಣೆ ಪಡೆದುಕೊಂಡವರು. ಕರೊನಾ ಅವಧಿಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭ ಕಾರ್ಮಿಕರ ಹಿತಗಳ ಕುರಿತು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆ ಅಂದಿನ ಸರ್ಕಾರ ಅವರನ್ನು ತುರಾತುರಿಯಲ್ಲಿ ವರ್ಗಾವಣೆ ಕೂಡ ನಡೆಸಿತ್ತು. ಈ ವೇಳೆ ಕಾರ್ಮಿಕರು ಬ್ರಿಂಗ್ ಬ್ಯಾಕ್ ಕ್ಯಾಪ್ಟನ್ ಅನ್ನೋ ಅಭಿಯಾನವನ್ನು ಕೈಗೊಂಡಿದ್ದರು. ಪ್ರವಾಸದ ಸಂದರ್ಭ ಐಷಾರಾಮಿ ಹೊಟೇಲ್‌ಗಳಲ್ಲಿ ವಾಸ್ತವ್ಯ ಮಾಡುವ ಇತರ ಉನ್ನತ ಅಧಿಕಾರಿಗಳಿಗೆ ಮಣಿವಣ್ಣನ್ ಮಾದರಿಯಾಗಿದ್ದಾರೆ.

=========================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net