

ಮಂಗಳೂರು: ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ ರಾಜ್ಯದ ಸೋನಿ ಕುಮಾರ್ (27) ಎಂಬಾತನನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೀಚ್ ರಸ್ತೆಯಲ್ಲಿ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದವನು ಪೊಲೀಸ್ ಜೀಪ್ ಕಂಡು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಹಿಡಿದು ವಿಚಾರಿಸಿದಾಗ ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ಓಡಿ ಹೋಗಲು ಕಾರಣ ಕೇಳಿದಾಗ ತನ್ನ ಬ್ಯಾಗ್‌ನಲ್ಲಿ ಗಾಂಜಾ ಇರುವುದನ್ನು ತಿಳಿಸಿದ್ದಾನೆ.
ಈತನ ಬಳಿಯಿಂದ 30 ಸಾವಿರ ರೂ. ಮೌಲ್ಯದ ಸುಮಾರು 1.5 ಕೆ.ಜಿ. ಗಾಂಜಾ ಮತ್ತು 15 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ವಶಪಡಿಸಿಕೊಂಡಿದ್ದಾರೆ.