ಪುತ್ತೂರು ಘಟಕದ ನಿವೃತ್ತ ಗೃಹರಕ್ಷಕ ಸುದರ್ಶನ್ ಜೈನ್‌ಗೆ ಸನ್ಮಾನ

mng--19 Sep Sudarshan jain
Published on

ಮಂಗಳೂರು: ಗೃಹರಕ್ಷಕದಳದಿಂದ ನಿವೃತ್ತರಾದ ಪುತ್ತೂರು ಘಟಕದ ಸುದರ್ಶನ್ ಜೈನ್ ಅವರನ್ನು ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.


ಸುದರ್ಶನ ಜೈನ್ ಅವರು ಸುಮಾರು 25 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಸೆ.10ರಂದು ನಿವೃತ್ತರಾಗಿದ್ದರು.
ಸಮಾದೇಷ್ಠ ಡಾ.ಮುರಲೀ ಮೋಹನ್ ಚೂಂತಾರು ಅವರು ಸುದರ್ಶನ್ ಅವರನ್ನು ಸನ್ಮಾನಿಸಿದರು. ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಮಂಜುಳಾ, ಸಂಜಯ್, ಸುಲೋಚನ, ನಿಶಾ, ಪುತ್ತೂರು ಘಟಕದ ಗೃಹರಕ್ಷಕ ಸತ್ಯನಾರಾಯಣ ಭಟ್, ಮೂಲ್ಕಿ ಘಟಕದ ರಂಜನಿ ಮತ್ತು ರೇಣುಕಾ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net