ಟೆಂಪೋ ಡಿಕ್ಕಿಯಾಗಿ ಪರಾರಿ ಕಾರ್ಮಿಕ ಮೃತ್ಯು

accident
Published on

ಮಂಗಳೂರು: ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಹುಲ್ಲು ಕತ್ತರಿಸುತ್ತಿದ್ದ ಕಾರ್ಮಿಕನೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರಿನಲ್ಲಿ ಸಂಭವಿಸಿದೆ.


ಬಿಹಾರ ಮೂಲದ ವಿಕ್ಕಿ (30) ಮೃತಪಟ್ಟವರು. ಬೆಳಗ್ಗೆ 7 ಗಂಟೆಯ ಸುಮಾರಿಗೆ ವಿಕ್ಕಿ, ಗೋಪಾಲ ಪೂಜಾರಿ ಹಾಗೂ ಇತರ ಇಬ್ಬರು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಸಂಸ್ಥೆಯ ಕಾರ್ಮಿಕರಾಗಿ ಹುಲ್ಲು ಕತ್ತರಿಸಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದ ಟೆಂಪೊ ಢಿಕ್ಕಿ ಹೊಡೆದು ಪರಾರಿಯಾಗಿದೆ. ವಿಕ್ಕಿ ಅವರು ಮೃತಪಟ್ಟು ಬ್ರಹ್ಮಾವರದ ಗೋಪಾಲ ಪೂಜಾರಿ ಗಾಯಗೊಂಡಿದ್ದಾರೆ. ಇತರ ಇಬ್ಬರು ಕಾರ್ಮಿಕರು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದರಿಂದ ಬಚಾವಾಗಿದ್ದಾರೆ. ಢಿಕ್ಕಿಪಡಿಸಿ ಪರಾರಿಯಾಗಿದ್ದ ಟೆಂಪೋವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net