

ಮಂಗಳೂರು: ಮೇರಿಹಿಲ್‌ನ ಯುನೈಟೆಡ್ ಕ್ರಿಕೆಟರ್ಸ್ ಹೆಲಿಪ್ಯಾಡ್ ವತಿಯಿಂದ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯುನಿವರ್ಸಲ್ ಇಲೆವೆನ್ ಬೋಂದೆಲ್ ತಂಡ ವಿನ್ನರ್ಸ್, ಭಾಷಾ ಇಲೆವೆನ್ ತಂಡ ರನ್ನರ್ಸ್ ಆಗಿ ಹೊರ ಹೊಮ್ಮಿದವು.
ಬೆಸ್ಟ್ ಬ್ಯಾಟ್ಸ್‌ಮೆನ್ ಇಮ್ರಾನ್, ಬೆಸ್ಟ್ ಬೌಲರ್ ಜೋಯೆಲ್, ಮ್ಯಾನ್ ಆಫ್ ದ ಸಿರೀಸ್ ಕಶ್ಯಪ್ ಹಾಗೂ ಮ್ಯಾನ್ ಆಫ್ ದ ಮ್ಯಾಚ್ ಬಹುಮಾನವನ್ನು ಆಲಿ ಅವರು ಪಡೆದರು.
ಹೆಲಿಪ್ಯಾಡ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಹರೀಶ್ ಮೋಟುಕಾನ, ಯೋಗ ಶಿಕ್ಷಕ ರಾಜೇಶ್ ಕಾಮತ್, ರಿಜ್ವಾನ್ ಶ್ರೀಲಂಕಾ ಹಾಗೂ ರಮೇಶ್ ನೆಹರೂ ಮೈದಾನ ಅವರು ವಿಜೇತರಿಗೆ ಬಹುಮಾನ ವಿತರಿಸಿ, ಶುಭ ಹಾರೈಸಿದರು.
ಸಂಘಟಕರಾದ ಕೀರ್ತನ್, ಅಕ್ಷಯ್, ಅನಿಲ್ ಕುತ್ತಮೊಟ್ಟೆ, ಸುನಿಲ್ ಮೊದಲಾದವರಿದ್ದರು. ಒಟ್ಟು 6 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.