ಆರೋಗ್ಯ ತಪಾಸಣೆ ಶಿಬಿರ

mng-15jan-vishvabharati
ಆರೋಗ್ಯ ತಪಸಣಾ ಶಿಬಿರವನ್ನು ಹೃದ್ರೋಗತಜ್ಞ ಡಾ.ನರಸಿಂಹ ಪೈ ಮತ್ತು ನೇತ್ರತಜ್ಞ ಡಾ.ಸೌಂದರು ಸುಬ್ರಹ್ಮಣ್ಯ ಉದ್ಘಾಟಿಸಿದರು.
Published on

ಮಂಗಳೂರು: ಕೋಡಿಕಲ್‌ನ ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಅತ್ತಾವರದ ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಕೋಡಿಕಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಹೃದ್ರೋಗತಜ್ಞ ಡಾ.ನರಸಿಂಹ ಪೈ ಮತ್ತು ನೇತ್ರತಜ್ಞ ಡಾ.ಸೌಂದರು ಸುಬ್ರಹ್ಮಣ್ಯ ಶಿಬಿರ ಉದ್ಘಾಟಿಸಿದರು.

ಪಾಲಿಕೆ ಸದಸ್ಯ ಕಿರಣ್ ಕುಮಾರ್, ಉದ್ಯಮಿ ರಮೇಶ್ ಬಾಳಿಗ. ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಪ್ರೇಮಾನಂದ ಕುಲಾಲ್. ಪೊಲೀಸ್ ಅಧಿಕಾರಿ ಅನಿತಾ, ಲಕ್ಷ್ಮಣ್ ಶೆಟ್ಟಿ, ಮಹಾಬಲ ಚೌಟ ಉಪಸ್ಥಿತರಿದ್ದರು. ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅಶೋಕ್ ಕುಮಾರ್ ಕಲ್ಪನೆ ಸ್ವಾಗತಿಸಿ, ದಿನೇಶ್ ಕೋಡಿಕಲ್ ವಂದಿಸಿದರು. ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net