

ಮಂಗಳೂರು: ಸಂಚಾರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿರುವ ಮಣಿಕಂಠ ಮಂದಾರಬೈಲು ಅವರು 2024ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭ ನೀಡುವ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
2000 ಎ.15ರಂದು ಪೊಲೀಸ್ ಇಲಾಖೆಗೆ ಸೇರಿದ ಇವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಉರ್ವ, ಮಂಗಳೂರು ಸಂಚಾರ ಪಶ್ಚಿಮ ಮತು ್ತ ಬರ್ಕೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಪಾಂಡೇಶ್ವರ ಸಹಾಯಕ ಪೊಲೀಸ್ ಆಯುಕ್ತರ ಕಛೇರಿ ಸಂಚಾರ ಉಪವಿಭಾಗ ಇಲ್ಲಿ ಮುಖ್ಯ ಅರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.'
ವಿಶೇಷವಾಗಿ ಸಾಮಾನ್ಯ ಕರ್ತವ್ಯ, ಸಹಾಯಕ ಠಾಣಾ ಬರಹಗಾರ, ತನಿಖಾ ಸಹಾಯಕ ಹಾಗೂ ಗುಪ್ತಮಾಹಿತಿ ಸಂಗ್ರಹ ಕರ್ತವ್ಯಗಳನ್ನು ಅತ್ಯಂತ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿಕೊಂಡು ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಹಿತಕರ ಘಟನೆಗಳ ಮುನ್ಸೂಚನೆಯನ್ನು ತತ್ಕಾಲದಲ್ಲಿ ಇಲಾಖಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳು ್ಳವಲ್ಲಿ ಹಾಗೂ ಇಲಾಖೆಯ ಗೌರವವನ್ನು ಉಳಿಸಿಕೊಳು ್ಳವಲ್ಲಿ ಶ್ರಮಿಸಿದ್ದಾರೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡವರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ್ದಾರೆ. ಲೋಕ ಅದಾಲತ್‌ನಲ್ಲಿ 1 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ನಡುವೆ ಉತ್ತಮ ಬಾಂಧವ್ಯ ಉಂಟು ಮಾಡುವಲ್ಲಿ ಕಾರಣರಾಗಿದ್ದಾರೆ. 2022ನೇ ಸಾಲಿನಲ್ಲಿ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಹಲವಾರು ಪ್ರಸಂಶನೀಯ ಪತ್ರ ಪಡೆದಿದ್ದಾರೆ.