ಸಾಲ ಮರುಪಾವತಿ ಮಾಡಿದರೂ ಕಿರುಕುಳ

FIR-2
Published on

ಮಂಗಳೂರು: ಆ್ಯಪ್ ಮೂಲಕ ಪಡೆದ ಸಾಲವನ್ನು ಮರುಪಾವತಿ ಮಾಡಿದರೂ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು ಫೆ.20ರಂದು ಯೂಟ್ಯೂಬ್ ನೋಡುತ್ತಿದ್ದ ವೇಳೆ ಸ್ಕೋರೆಪ್ರೋ ಆಪ್ ಎನ್ನುವ ಆಪ್‌ನಲ್ಲಿ ಸಾಲ ಸವಲತ್ತುಗಳನ್ನು ನೋಡಿ ಆಪ್ ಡೌನ್ ಲೋಡ್ ಮಾಡಿದ್ದಾರೆ. ಬಳಿಕ 38 ಸಾವಿರ ರೂ. ಸಾಲಕ್ಕೆ ಕೋರಿಕೆ ಸಲ್ಲಿಸಿದ್ದು, ಅವರ ಖಾತೆಗೆ 23,800 ರೂ. ಜಮೆಯಾಗಿದೆ. ಸಾಲ ಮರುಪಾವತಿ ಮಾಡುವಂತೆ ಬಂದ ಸಂದೇಶದಂತೆ ಫೆ.24 ಮತ್ತು 25ರಂದು ಒಟ್ಟು 62,100 ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. ಆದರೆ ಆಪ್‌ನವರು ಹೆಚ್ಚುವರಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಿದ್ದು ಮಾತ್ರವಲ್ಲದೆ, ದೂರುದಾರರ ತಂದೆ-ತಾಯಿಯ ಭಾವಚಿತ್ರಕ್ಕೆ ಅಶ್ಲೀಲ ತುಣುಕುಗಳನ್ನು ಸೇರಿಸಿ ದೂರುದಾರರ ಮೊಬಲ್‌ನಲ್ಲಿದ್ದ ಸ್ನೇಹಿತರ, ಸಂಬಂಧಿಕರ ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಿ ಅದರ ಸ್ಕ್ರೀನ್‌ಶಾಟ್‌ನ್ನು ದೂರುದಾರರ ಮೊಬಲ್‌ಗೆ ಕಳುಹಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net