

ಮಂಗಳೂರು: ಭಾರತದ ಪ್ರಮುಖ ಸ್ವದೇಶಿ ಐಸ್ ಕ್ರೀಮ್ ಬ್ರಾೃಂಡ್‌ಗಳಲ್ಲಿ ಒಂದಾದ ಹಾಂಗ್ಯೋ ಐಸ್ ಕ್ರೀಮ್ಸ್ ಬೆಂಗಳೂರಿನ ಕಾರ್ಪೊರೇಟ್ ಕಚೇರಿಯಲ್ಲಿ 22 ನೇ ವಾರ್ಷಿಕೋತ್ಸವವನ್ನು ಆಚರಿಸಿತು.
ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್ ಪೈ ಮತ್ತು ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಆರ್. ಪೈ ಭಾಗವಹಿಸಿದ್ದರು. ಜೊತೆಗೆ ಹ್ಯಾಂಗ್ಯೋದ ಯಶಸ್ಸಿನ ಪ್ರಯಾಣದಲ್ಲಿ ಮೌಲ್ಯಯುತ ಪಾಲುದಾರರಾದ ಉಲ್ಲಾಸ್ ಕಾಮತ್ ಮತ್ತು ಕಂಪನಿ (ಸಂಸ್ಥಾಪಕ - ಯುಕೆ ಕೋ) ಪಾಲ್ಗೊಂಡಿದ್ದರು.
ಹಾಂಗ್ಯೋವನ್ನು ಪ್ರೀತಿಯ ಬ್ರಾೃಂಡ್ ಆಗಿ ರೂಪಿಸಿದ ಹಲವು ವರ್ಷಗಳ ಪರಿಶ್ರಮ, ನಾವೀನ್ಯತೆ ಮತ್ತು ನಂಬಿಕೆಗೆ ಈ ಆಚರಣೆಯು ಗೌರವವಾಗಿದೆ. ಬ್ರಾೃಂಡ್‌ನ ಗಮನಾರ್ಹ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಉದ್ಯೋಗಿಗಳು, ಪಾಲುದಾರರು ಮತ್ತು ಗ್ರಾಹಕರ ಶ್ರಮ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಲಾಯಿತು.
* ಹೊಸ ಉತ್ಪನ್ನ ಬಿಡುಗಡೆ: ಈ ಸಂದರ್ಭ ಹಾಂಗ್ಯೋದ ಹೊಸ ಉತ್ಪನ್ನ ಚೋಕೊ ರೋಡಿ ಬಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಐಸ್ ಕ್ರೀಮ್ ಪ್ರಿಯರಿಗಾಗಿ ರಚಿಸಲಾದ ರುಚಿಕರವಾದ ಖಾದ್ಯವಾಗಿದೆ. ಗ್ರಾಹಕರಿಗೆ ಇನ್ನಷ್ಟು ಹೊಸ ಹೊಸ ಅನ್ವೇಷಣೆಗಳೊಂದಿಗೆ ವಿನೂತನ ಖಾದ್ಯಗಳನ್ನು ನೀಡಲು ಹಾಂಗ್ಯೋ ಬದ್ಧವಾಗಿದೆ.
ಹಾಂಗ್ಯೊ ಐಸ್‌ಕ್ರೀಮ್‌ಗಳು ಸಂತೋಷವನ್ನು ಸಂಭ್ರಮಿಸುವ, ಸ್ಮರಣೀಯ ಅನುಭವಗಳನ್ನು ಸೃಷ್ಟಿಸುವ ಮತ್ತು ವಿನೂತನ ಕೊಡುಗೆಗಳೊಂದಿಗೆ ಐಸ್ ಕ್ರೀಮ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ತನ್ನ ಧ್ಯೇಯದಲ್ಲಿ ತೊಡಗಿಸಿಕೊಂಡಿದೆ. 2025ರಲ್ಲಿ ಹೊಸ ಹೊಸ ಉತ್ಪನ್ನಗಳ ಬಿಡುಗಡೆಯೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಲು ಹಾಂಗ್ಯೋ ಸಂಸ್ಥೆ ಉದ್ದೇಶಿಸಿದೆ.