ಹಾಂಗ್ಯೋ ಐಸ್ ಕ್ರೀಂ ರಾಜ್ಯದಲ್ಲಿ ಮೊದಲ ಸ್ಥಾನ ಗುರಿ 22ನೇ ಬಿಸಿನೆಸ್ ಮೀಟ್‌ನಲ್ಲಿ ಎಂಡಿ ಪ್ರದೀಪ್ ಜಿ. ಪೈ

mng--2 March Hangyo
Published on

ಮಂಗಳೂರು: ದಕ್ಷಿಣ ಭಾರತದ ಪ್ರಮುಖ ಐಸ್ ಕ್ರೀಂ ಬ್ರಾೃಂಡ್ ಆಗಿರುವ ಹಾಂಗ್ಯೋ ಐಸ್ ಕ್ರೀಂ ರಾಜ್ಯದಲ್ಲಿ ನಂ.1 ಸ್ಥಾನಕ್ಕೇರುವ ಗುರಿಯನ್ನು ಹೊಂದಿದೆ ಎಂದು ಹಾಂಗ್ಯೋ ಐಸ್ ಕ್ರೀಂ ಸಂಸ್ಥೆ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ ಅವರು ಹೇಳಿದ್ದಾರೆ.

ಅತ್ತಾವರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ಹಾಂಗ್ಯೋ ವಿತರಕರು ಹಾಗೂ ಮಾರಾಟಗಾರರ 22ನೇ ವರ್ಷದ ಬಿಸಿನೆಸ್ ಮೀಟ್‌ನಲ್ಲಿ ಮಾತನಾಡಿದ ಅವರು, ವ್ಯಾಪಾರಾಭಿವೃದ್ಧಿ ಹಾಗೂ ನಿರಂತರ ಆವಿಷ್ಕಾರ ಕೈಗೊಂಡರೆ ಮಾತ್ರ ಕಠಿಣ ಪೈಪೋಟಿ ನಡುವೆ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಮುಂದಿನ ಮೂರು ವರ್ಷಗಳಲ್ಲಿ ಹಾಂಗ್ಯೋ ಐಸ್‌ಕ್ರೀಂನ್ನು ದೇಶದಲ್ಲೇ ಅಗ್ರ 5ರೊಳಗೆ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಪ್ರಸ್ತುತ ದೇಶದ ಪ್ರಸಿದ್ಧ 12 ಐಸ್‌ಕ್ರೀಂ ಬ್ರಾೃಂಡ್‌ಗಳಲ್ಲಿ ಹಾಂಗ್ಯೋ ಒಂದಾಗಿದೆ. ರಾಜ್ಯದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ ಎಂದರು.

ಬ್ರಹ್ಮಾವರದ ಸಣ್ಣ ಘಟಕದಲ್ಲಿ 2003ರ ಫೆ.14ರಂದು ಹಾಂಗ್ಯೋ ಐಸ್‌ಕ್ರೀಂ ಉತ್ಪಾದನೆ ಕಾರ್ಯಾರಂಭಗೊಂಡಿತು. ಪ್ರಸ್ತುತ ದಕ್ಷಿಣದ 7 ರಾಜ್ಯಗಳಲ್ಲಿನ 410 ವಿತರಕರು ನಮ್ಮ ಕೈ ಜೋಡಿಸಿದ್ದಾರೆ, ಕಂಪನಿ ನಿರಂತರ ಬೆಳವಣಿಗೆಗೆ ವಿತರಕರು, ಮಾರಾಟಗಾರರು ನೆರವಾಗಿದ್ದೀರಿ. ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದವರು ಆಶಿಸಿದರು.

ಕಂಪನಿಯ ಸಿಒಒ ದಿನೇಶ್ ಶೆಣೈ ಅವರು ಮಾತನಾಡಿ, ದೇಶದಲ್ಲಿ ಐಸ್‌ಕ್ರೀಂ ಮಾರುಕಟ್ಟೆ ತ್ವರಿತ ಬೆಳವಣಿಗೆ ಸಾಧಿಸುತ್ತಿದೆ. ರಾಜ್ಯದಲ್ಲಿಯೇ 800-900 ಕೋಟಿ ರೂ. ವಹಿವಾಟು ನಡೆಯುತ್ತಿದೆ. 2024-25ರ ಸಾಲಿನಲ್ಲಿ ಹಾಂಗ್ಯೋ ಐಸ್‌ಕ್ರೀಂ ಅನ್ನು 28 ಕೋಟಿ ಜನ ಸವಿದಿದ್ದಾರೆ. ದುಬೈನಲ್ಲೂ ಸಮಾರಂಭಗಳಿಗೆ ಐಸ್ ಕ್ರೀಂ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ 1.25 ಲಕ್ಷ ಲೀಟರ್ ಐಸ್‌ಕ್ರೀಂ ಉತ್ಪಾದನೆಯಾಗುತ್ತಿದೆ. ಹಾಂಗ್ಯೋ ಪ್ರತಿಷ್ಠಿತ ಕಂಪನಿಗಳೊಂದಿಗೆ ಕೈ ಜೋಡಿಸಿದೆ. ಉತ್ಕೃಷ್ಟ ತಂತ್ರಜ್ಞಾನದ ಜೊತೆಯಲ್ಲಿ ಆವಿಷ್ಕಾರಿ ಉತ್ಪನ್ನಗಳನ್ನು ನಿರಂತರವಾಗಿ ಮಾರುಕಟ್ಟೆಗೆ ತರುತ್ತಿದೆ ಎಂದರು.

ಈ ಸಂದರ್ಭ ಹಾಂಗ್ಯೋ ಉತ್ಪನ್ನಗಳ ವಿತರಕರು ಹಾಗೂ ಮಾರಾಟಗಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಹಾಂಗ್ಯೋ ಉಪಾಧ್ಯಕ್ಷೆ ದೀಪಾ ಪೈ,ಮಾಜಿ ಉಪಾಧ್ಯಕ್ಷ ಸೈಮನ್ ಮಿರಾಂಡ, ಕೃಷ್ಣ ಉಪಸ್ಥಿತರಿದ್ದರು. ಸಾಹಿಲ್ ರೈ ನಿರೂಪಿಸಿದರು.

ಆರ್‌ಸಿಬಿ ಜೊತೆ ಮತ್ತೆ ಸಹಭಾಗಿತ್ವ

ಐಪಿಎಲ್ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಎರಡನೇ ಬಾರಿಗೆ ಹಾಂಗ್ಯೊ ಅಧಿಕೃತ ಐಸ್‌ಕ್ರೀಂ ಪಾರ್ಟನರ್‌ಶಿಪ್ ಮಾಡಿಕೊಂಡಿದ್ದು, ಆ ಕುರಿತ ಪ್ರದರ್ಶಿಕೆಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ನೂತನ ಫ್ಲೇವರ್ ರೇವ್ ಚೋಕೋ ರೋಡಿ ಐಸ್‌ಕ್ರೀಂ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net