ಗುರುಪುರ ಬಸ್ ಪಲ್ಟಿ, ಏಳು ಜನರಿಗೆ ಗಾಯ

Bus palty
Published on


ಗುರುಪುರ: ಕಟೀಲಿನಿಂದ ಬಿ.ಸಿ.ರೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಗುರುಪುರ ಕೈಕಂಬದ ಬಳಿ ಪೊಳಲಿ ದ್ವಾರದ ಇಳಿಜಾರು ರಸ್ತೆಯಲ್ಲಿ ಮಂಗಳವಾರ ಸಂಜೆ ಪಲ್ಟಿಯಾಗಿದ್ದು ಏಳು ಜನರಿಗೆ ಗಾಯವಾಗಿದೆ.


ಸಂಜೆ ವೇಳೆಯಾಗಿದ್ದರಿಂದ ಬಸ್‌ನಲ್ಲಿ ಪೂರ್ತಿ ಪ್ರಯಾಣಿಕರಿದ್ದು ಪೊಳಲಿ ದ್ವಾರದ ಬಳಿ ಜನರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಆದರೆ ಇಳಿಜಾರು ಪ್ರದೇಶದಲ್ಲಿ ಒಮ್ಮೆಲೆ ಚಲಿಸಿದ ಬಸ್ ಚಾಲಕನ ಚಾಕಚಕ್ಯತೆಯಿಂದ ಬಲಗಡೆಗೆ ತಿರುಗಿತು. ಎಡಗಡೆಗೆ ಚಲಿಸಿದ್ದರೆ ಆಳವಾದ ಕಂದಕಕ್ಕೆ ಉರುಳಿ ಬೀಳುವ ಸಾಧ್ಯತೆ ಇತ್ತು. ಆಳಕ್ಕೆ ಇಳಿದಿದ್ದರೆ ಅಷ್ಟೂ ಜನ ಪ್ರಯಾಣಿಕರು ಅಪಾಯಕ್ಕೆ ಸಿಲುಕುತ್ತಿದ್ದರು. ಆದರೆ ಚಾಲಕ ಬಲಗಡೆಗೆ ತಿರುಗಿಸಿದ್ದರಿಂದ ಮುಂಭಾಗದ ದರೆಗೆ ಬಡಿದು ಪಲ್ಟಿಯಾಗಿದೆ. ಬಸ್‌ನಲ್ಲಿ ಶಾಲಾ -ಕಾಲೇಜು ವಿದ್ಯಾರ್ಥಿಗಳು, ಕೆಲಸದಿಂದ ಮನೆಗೆ ಬರುವವರೇ ಹೆಚ್ಚಾಗಿದ್ದು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಒಂದೂವರೆ ಗಂಟೆಯಷ್ಟು ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಜ್ಪೆ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎರಡು ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net