ಮಂಗಳೂರಿನ ನೂತನ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

aaaa
ಉರ್ವಸ್ಟೋರ್‌ನ ಮುಡಾ ಕಚೇರಿ ಬಳಿ ನೂತನ ಗ್ರಂಥಾಲಯ ಕಟ್ಟಡಕ್ಕೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು. ಮೇಯರ್ ಜಯಾನಂದ ಅಂಚನ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಇದ್ದರು.
Published on

ಮಂಗಳೂರು: ಉರ್ವಸ್ಟೋರ್‌ನ ಮುಡಾ ಕಚೇರಿ ಬಳಿ ನೂತನ ಗ್ರಂಥಾಲಯ ಕಟ್ಟಡಕ್ಕೆ ಶಾಸಕ ವೇದವ್ಯಾಸ ಕಾಮತ್ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿದರು.

ಇಂಟರ್ನೆಟ್ ಯುಗದಲ್ಲಿ ಓದಲು ಸಾಕಷ್ಟು ಮೂಲಗಳು ಲಭ್ಯವಿದ್ದರೂ ಗ್ರಂಥಾಲಯದಲ್ಲಿ ಕುಳಿತು ಪುಸ್ತಕಗಳನ್ನು ಓದುವ ಅನುಭವವೇ ಬೇರೆ. ಹಾಗಾಗಿ ಮುಡಾ ಕಚೇರಿ ಮತ್ತು ಇಂದಿರಾ ಕ್ಯಾಂಟೀನ್ ಮಧ್ಯದ ಜಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟಿದ್ದು, ಕಟ್ಟಡ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ಗ್ರಂಥಾಲಯ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. 15 ಲಕ್ಷ ರೂ.ಅನುದಾನವನ್ನು ಮಹಾನಗರಪಾಲಿಕೆ ವತಿಯಿಂದ ಬಿಡುಗಡೆ ಮಾಡಿದರೆ ಉತ್ತಮ ಕಟ್ಟಡದ ಜತೆಗೆ ಉತ್ತಮ ಪುಸ್ತಕಗಳನ್ನೂ ಇಲ್ಲಿ ಜೋಡಿಸಬಹುದು ಎಂದು ವೇದವ್ಯಾಸ ಕಾಮತ್ ಹೇಳಿದರು.

ಮೇಯರ್ ಜಯಾನಂದ ಅಂಚನ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವ, ಕಿಶೋರ್ ಕೊಟ್ಟಾರಿ, ಮಹಾನಗರ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್ ಸುಧೀರ್ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ , ಪ್ರಮುಖರಾದ ಸುಬ್ರಹ್ಮಣ್ಯ ಅಂಗಡಿಗುಡ್ಡೆ , ಸಚಿನ್‌ರಾಜ್ ರೈ, ಸಾಯಿಪ್ರಸಾದ್ ಶೆಟ್ಟಿ ಗ್ರಂಥಾಲಯ ಅಭಿವೃದ್ಧಿ ಸಮಿತಿಯ ಸುಬ್ರಹ್ಮಣ್ಯ ಶೆಣೈ, ವಿಶ್ವನಾಥ ಕೋಟೆಕಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net