ಪಾಂಡೇಶ್ವರ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು

FIR-2
Published on

ಮಂಗಳೂರು: ಮನೆಯೊಂದರ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಕಳವಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಹೆಲೆನ್ ಲೋಬೋರವರು 2023ರ ಜ.4ರಂದು ತನ್ನ ಮಗಳು ಶೆರಲ್ ಲೋಬೋ ಅವರ ಮಗುವಿನ ನಾಮಕರಣಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ಈ ಸಮಯ ತನ್ನ ಬಳಿಯಿದ್ದ ಎಲ್ಲ ಚಿನ್ನಾಭರಣಗಳನ್ನು ಪಕ್ಕದ ಮನೆಯ ಮೇಬಲ್ ಾಂಟೆಸ್ ಎಂಬವರ ಬಳಿಯಲ್ಲಿ ನೀಡಿ, ಬೆಂಗಳೂರಿನಿಂದ ವಾಪಾಸು ಬಂದ ಬಳಿಕ ಬಂಗಾರವನ್ನು ಪಡೆದುಕೊಳ್ಳುವುದಾಗಿ ತಿಳಿಸಿರುತ್ತಾರೆ. ಬೆಂಗಳೂರಿನಿಂದ ವಾಪಾಸು ಬಂದ ಬಳಿಕ ಮೇಬಲ್ ಾಂಟೆಸ್‌ರವರು ಚಿನ್ನಾಭರಣಗಳನ್ನು ವಾಪಾಸು ಕೊಂಡು ಹೋಗುವಂತೆ ತಿಳಿಸಿದಾಗ, ಮನೆಗೆ ಹೊಸ ಕಬೋರ್ಡ್‌ಗಳನ್ನು ತೆಗೆದುಕೊಂಡ ಬಳಿಕ ಚಿನ್ನಾಭರಣಗಳನ್ನು ವಾಪಾಸು ಪಡೆಯುವುದಾಗಿ ತಿಳಿಸಿದ್ದರು. ಮೇಬಲ್ ಾಂಟೆಸ್‌ರವರ ಮನೆಯಲ್ಲಿಯೇ ಬಿಟ್ಟಿದ್ದರು.


2023ನೇ ನವೆಂಬರ್ ತಿಂಗಳಿನಲ್ಲಿ ಹೊಸ ಕಬೋರ್ಡ್ ತಂದ ಬಳಿಕ ಮೇಬಲ್ ಾಂಟೆಸ್‌ರವರ ಬಳಿಯಿದ್ದ ಚಿನ್ನಾಭರಣಗಳನ್ನು ವಾಪಾಸು ತೆಗೆದು, ಪರಿಶೀಲಿಸದೆ ಮನೆ ಕಪಾಟಿನಲ್ಲಿದ್ದರು. ಜೂ.16ರಂದು ಚಿನ್ನಾಭರಣಗಳನ್ನು ಪರಿಶೀಲಿಸುವ ಸಂದರ್ಭ 13 ಲಕ್ಷ ರೂ. ಮೌಲ್ಯದ 25 ಪವನ್ ನೆಕ್ಲೆಸ್ 1, ಚೈನ್ 2, ಕರಿಮಣಿ ಸರ 1, ಕೈಬಳೆ, 1 ಜತೆ ಕಿವಿಯ ಓಲೆ ಕಳವಾಗಿದೆ.
ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net