

ಮಂಗಳೂರು: ಪ್ರತ್ಯೇಕ ಎರಡು ಪ್ರಕರಣದಲ್ಲಿ ಮಾದಕ ಸೇವನೆ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ತಾವರ ಸುಂದರ ಪೂಜಾರಿ ಕಂಪೌಂಡ್ ನಿವಾಸಿ ಅಬ್ದುಲ್ ಸಮೀರ್, ಶನೀಝ್, ಅಶ್ರ್ ಮತ್ತು ನಿತೇಶ್ ಬಂಧಿತ ಆರೋಪಿಗಳು.
ನಗರದ ಪಡೀಲ್ ರೈಲ್ವೇ ಬ್ರಿಡ್ಜ್‌ನಿಂದ ಸರಿಪಳ್ಳ ಕಡೆಗೆ ಹೋಗುವ ರಸ್ತೆ ಬದಿ ಮಾದಕ ಸೇವನೆ ಆರೋಪದಲ್ಲಿ ಅಶ್ರ್ ಮತ್ತು ನಿತೇಶ್ ಬಂಧಿಸಲಾಗಿದೆ. ಮೇ 29ರಂದು ರಾತ್ರಿ 8 ಗಂಟೆಗೆ ನಗರದ ಪಡೀಲ್ ರೈಲ್ವೇ ಬ್ರಿಡ್ಜ್‌ನಿಂದ ಸರಿಪಳ್ಳ ಕಡೆಗೆ ಹೋಗುವ ರಸ್ತೆಯ ಬದಿ ಅಶ್ರ್ ಮತ್ತು ನಿತೇಶ್ ಎಂಬವರು ಯಾವುದೋ ಮಾದಕ ವಸ್ತುವನ್ನು ಸೇವಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಂಕನಾಡಿ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಅತ್ತಾವರ ಸುಂದರ ಪೂಜಾರಿ ಕಂಪೌಂಡ್ ನಿವಾಸಿ ಅಬ್ದುಲ್ ಸಮೀರ್ (19) ಮೇ 29ರಂದು ಮಧ್ಯಾಹ್ನ 4ಗಂಟೆಗೆ ಸಿಟಿ ಸೆಂಟರ್ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 29ರಂದು ಸಂಜೆ 5.30ರ ವೇಳೆಗೆ ಬಂದರು ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾದಕ ಸೇವನೆ ಆರೋಪಿ ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಶನೀಝ್ (24)ನನ್ನು ವಶಕ್ಕೆ ಪಡೆಯಲಾಗಿದೆ. ಈತನನ್ನು ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿದ್ದಾನೆ. ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.