

ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ಸೇವನೆ ಮಾಡಿದ ಆರೋಪದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕಂಡತ್‌ಪಳ್ಳಿ ಸಾರ್ವಜನಿಕ ರಸ್ತೆ ಬದಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಬಂದರು ನಿವಾಸಿ ಅಮೀರ್ ಸುಹೇಲ್ (28) ಬಂಧಿಸಲಾಗಿದೆ. ಆರೋಪಿ ಡಿ.19ರಂದು 6.30ರ ವೇಳೆಗೆ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದಾನೆ. ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸೈಮನ್‌ಲೇನ್ ಕ್ರಾಸ್ ಬಳಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ರಾಹುಲ್ ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.18ರಂದು ರಾತ್ರಿ 7.35ರ ವೇಳೆಗೆ ಆರೋಪಿ ಮಾದಕ ವ್ಯಸನ ಮಾಡಿರುವ ಬಗ್ಗೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆರೋಪಿಯು ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ನಗರದ ಸುಲ್ತಾನ್ ಬತ್ತೇರಿ ಬಳಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಕೇರಳ ಕೊಲ್ಲಂ ನಿವಾಸಿ ಅನಾಸ್ ಮೊಹಮ್ಮದ್ (21) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಮಂಜೂರಿನ ಕಾಲೇಜೊಂದರ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಜಪೆ ನಿವಾಸಿ ಮೊಹಮ್ಮದ್ ರಾಜಿ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಡಿ.19ರಂದು ಸಂಜೆ 7.05ರ ವೇಳೆಗೆ ಆರೋಪಿ ಮಾದಕ ಸೇವನೆ ಮಾಡಿ ಕಾಲೇಜು ರೋಡ್ ಬಳಿ ತಿರುಗಾಡುತ್ತಿದ್ದ. ಈತನನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ನಗರದ ದಂಬೆಲ್ ನದಿ ತೀರದಲ್ಲಿ ಮಾದಕ ಸೇವನೆ ಮಡಿದ ಆರೋಪದಲ್ಲಿ ಕೇರಳ ಕಣ್ಣೂರು ನಿವಾಸಿ ಅಭಿನವ್ ಕೆ.ಪಿ. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ದಂಬೆಲ್ ನದಿ ಕಿನಾರೆಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದ. ಈತನನ್ನು ವಿಚಾರಿಸಿದಾಗ ಮಾದಕ ಸೇವನೆ ಮಾಡಿರುವುದನ್ನು ಒಪ್ಪಿದ್ದಾನೆ. ಬಳಿಕ ವೈದ್ಯಕೀಯ ಸೇವನೆಯಲ್ಲೂ ಮಾದಕ ಸೇವನೆ ಮಾಡಿರುವುದು ದೃಪಟ್ಟಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.