

ಮಂಗಳೂರು: ಆರೋಹ ಫಿಲಂಸ್ ಬ್ಯಾನರ್‌ನ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ. ನಿರ್ಮಿಸಿರುವ ‘ಭಾವ ತೀರ ಯಾನ’ ಕನ್ನಡ ಸಿನೆಮಾ ಫೆ.21ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಸುಂದರವಾದ ಪ್ರೇಮಕತೆ, ಭಾವನಾತ್ಮಕ ಅಂಶಗಳನ್ನು ಹೊಂದಿರುವ ಈ ಚಿತ್ರ ಎಲ್ಲಾ ವಯೋಮಾನದವರಿಗೆ ಆಪ್ತವೆನಿಸುವ ರೀತಿಯಲ್ಲಿ ಮೂಡಿಬಂದಿದೆ. ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಸಜ್ಜಾಗಿದೆ ಎಂದು ಚಿತ್ರದ ನಿರ್ದೇಶಕ ಮಯೂರ್ ಅಂಬೆಕಲ್ಲು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸಕಲೇಶಪುರ, ಮಂಗಳೂರು, ಸುಳ್ಯ ಮೊದಲಾದೆಡೆ ಚಿತ್ರೀಕರಣ ಮಾಡಲಾಗಿದೆ. ರಮೇಶ ಭಟ್, ವಿದ್ಯಾಮೂರ್ತಿ ಮೊದಲಾದವರು ತಾರಾಗಣದಲ್ಲಿದ್ದಾರೆ ಎಂದವರು ವಿವರಿಸಿದರು.
ನಿರ್ಮಾಪಕ ಶೈಲೇಶ್ ಅಂಬೆಕಲ್ಲು, ನಿರ್ದೇಶಕ, ನಟ ತೇಜಸ್ ಕಿರಣ್, ನಟಿಯರಾದ ಆರೋಹಿ ನೈನ, ಅನೂಷಾ ಕೃಷ್ಣ, ನಟರಾದ ಸಂದೀಪ್ ರಾಜಗೋಪಾಲ್, ಬಾಲನಟಿ ಶಮಾತ್ಮಿಕಾ ಉಪಸ್ಥಿತರಿದ್ದರು.