ಜೀವನದಲ್ಲಿ ಮಾನವೀಯ ಗುಣ ಅವಶ್ಯ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ನವಶಕ್ತಿ ಕಾರ್ಯಕ್ರಮದಲ್ಲಿ ಡಾ.ಆಶಾ ಜ್ಯೋತಿ ರೈ ಹೇಳಿಕೆ

mng-oct 18-expert
Published on


ಮಂಗಳೂರು: ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದೆ. ಜೀವನದಲ್ಲಿ ಮಾನವೀಯ ಗುಣ ಬೆಳೆಸಿಕೊಳ್ಳುವುದು ಅತಿ ಅವಶ್ಯ ಎಂದು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಹೇಳಿದರು.


ಕೊಡಿಯಾಲ್ಬೈಲ್ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ನವಶಕ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು ತೊಡೆದು ಹಾಕಿ ಧನಾತ್ಮಕವಾಗಿ ಬೆಳೆಯಬೇಕು. ಕೊರತೆಯನ್ನು ಶಕ್ತಿಯನ್ನಾಗಿಸಬೇಕು. ನವರಾತ್ರಿಯ ಆಚರಣೆಯ ಮಹತ್ವವೂ ಇದೇ ಆಗಿದೆ ಎಂದವರು ಹೇಳಿದರು.


ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜೀವನದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮದೊಂದಿಗೆ ಗುರುಹಿರಿಯರನ್ನು, ಹೆತ್ತವರನ್ನು ಗೌರವಿಸುವುದು ಅವಶ್ಯ. ಈ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದರು.


ಎಕ್ಸ್‌ಪರ್ಟ್ ಶಿಕ್ಷಣಗಳ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ನವರಾತ್ರಿಯ ಸಮಯದಲ್ಲಿ ಮಾತ್ರ ನವಶಕ್ತಿ ಆರಾಧನೆ ಅಲ್ಲ. ಪ್ರತಿದಿನವೂ ನವಶಕ್ತಿಯ ರೂಪವಾದ ಮಹಿಳೆಯ ಪರಿಶ್ರಮ ಅವಳ ತ್ಯಾಗವನ್ನು ಅರ್ಥ ಮಾಡಿಕೊಳ್ಳುವ ಕೆಲಸವಾಗಬೇಕು. ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿ ಮಹಿಳೆಯನ್ನು ಗೌರವಿಸುವ ಜತೆಗೆ ಅವಳನ್ನು ಅರ್ಥಮಾಡಿಕೊಳ್ಳುವ ಕೆಲಸ ಕೂಡ ಆಗಬೇಕು ಎಂದರು.


ಈ ಸಂದರ್ಭ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್, ಸಂಸ್ಥೆಯ ಅರ್ಕಿಟೆಕ್ಟೃ್ ದೀಪಿಕಾ ಎ.ನಾಯಕ್ ಉಪಸ್ಥಿತರಿದ್ದರು.


ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಕೊಡಿಯಾಲ್ಬೈಲ್ನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ನಿಖಿಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net