ಶಿಕ್ಷಣಕ್ಕೆ ನೆರವಾಗುವುದು ಪುಣ್ಯದ ಕೆಲಸ -- ಕಾರುಣ್ಯ ಟ್ರೋಫಿ ಉದ್ಘಾಟಿಸಿ ಮೇಯರ್ ಮನೋಜ್ ಕುಮಾರ್ ಅಭಿಮತ

mng--1 Dec Edu karunya
Published on

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಪುಣ್ಯದ ಕೆಲಸ ಎಂದು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದರು.

ಬಂಗ್ರಕೂಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ ಭಾನುವಾರ ಕೀರ್ತಿಶೇಷ ದಿ.ವಿಶ್ವನಾಥ ಆಳ್ವ ಶಾಂತಿನಗರ ಸ್ಮರಣಾರ್ಥ ಟೀಮ್ ಎಜು ಕಾರುಣ್ಯ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾನಿಧಿಯ ಸಹಾಯಾರ್ಥ ಹಮ್ಮಿಕೊಂಡ ಆಹ್ವಾನಿತ 32 ತಂಡಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾವಳಿ ಕಾರುಣ್ಯ ಟ್ರೋಫಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ದಾನಿಗಳ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಮೋಹನದಾಸ ಮರಕಡ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿರುವುದು ಯುವಕರಿಗೆ ಮಾದರಿ ಎಂದರು.

ಯಕ್ಷಗಾನ ಪ್ರಸಂಗಕರ್ತ ಜಿ.ಕೆ.ಶ್ರೀನಿವಾಸ ಸಾಲ್ಯಾನ್ ಮಾತನಾಡಿ, ಯುವಕರು ಸಂಘಟಿತರಾಗಿ ಕೆಲಸ ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಇದಕ್ಕೆ ಈ ಕ್ರಿಕೆಟ್ ಪಂದ್ಯಾವಳಿ ಉತ್ತಮ ಉದಾಹರಣೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿ,ನಿರಂತರವಾಗಿ ಓಡಾಟ ನಡೆಸುತ್ತಾ ಸದಾ ಕಾರ್ಯಕ್ರಮಗಳನ್ನು ಸಂಘಟಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ದಾನಿಗಳ ಮೂಲಕ ನೆರವು ಕಲ್ಪಿಸಿಕೊಡುತ್ತಿರುವ ಮೋಹನದಾಸ ಮರಕಡ ಅವರ ಸೇವೆ ಶ್ಲಾಘನೀಯ ಎಂದರು.

ಅಬ್ಬೆಟ್ಟು ಉದಯ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಅಬ್ಬೆಟ್ಟು, ಪತ್ರಕರ್ತರಾದ ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಪ್ರಮೋದ್, ರೋಶನಿ ನಿಲಯದ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ಭಟ್, ಯುವ ಸ್ಪಂದನ ಸಿಇಒ ರಾಜೇಶ್ ಅತ್ಯಾಡಿ,ಸುಧೀರ್ ಆಳ್ವ, ಉಮೇಶ್ ಮಲರಾಯಸ್ಥಾನ ಮೊದಲಾದವರು ಅತಿಥಿಗಳಾಗಿದ್ದರು.

ಎಜು ಕಾರುಣ್ಯ ಟ್ರೋಫಿಯ ಸಂಚಾಲಕ ಮೋಹನದಾಸ ಮರಕಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net