ಅಕ್ರಮ ಇ-ಸಿಗರೇಟ್ ಮಾರಾಟ ನಾಲ್ವರ ಬಂಧನ

mng--22 Aug e sigarate
Published on

ಮಂಗಳೂರು: ನಗರದ ಲಾಲ್‌ಬಾಗ್ ಸಾಯಿಬಿನ್ ಕಾಂಪ್ಲೆಕ್ಸ್‌ನ ಮೂರು ಮಳಿಗೆಯಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ನಾಲ್ವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.


ಮಣ್ಣಗುಡೆ ಸುಬ್ಬರಾವ್ ಕಂಪೌಂಡ್ ನಿವಾಸಿ ಶಿವಕುಮಾರ್ ಯಾನೆ ಶಿವು (34), ಕುತ್ತಾರ್‌ಪದವು ಮಂಜಿಲ್ ನಿವಾಸಿ ಹಸನ್ ಶರ್ೀ (50), ಕುತ್ತಾರ್‌ಪದವು ಮದನಿ ನಗರ ನಿವಾಸಿ ರೆಹಮತುಲ್ಲಾ (45) ಹಾಗೂ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆಯ ಸ್ವಾತಿ (26) ಬಂಧಿತರು.


ನಗರದ ಸಾಯಿಬೀನ್ ಕಾಂಪ್ಲೆಕ್ಸ್‌ನ ಆಮಂತ್ರಣ, ಯೂನಿಕ್ ವರ್ಲ್ಡ್ ಮತ್ತು ೆಂಟಾಸ್ಟಿಕ್ ವರ್ಲ್ಡ್ ಅಂಗಡಿಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ ಇ-ಸಿಗರೇಟ್‌ಗಳನ್ನು ಮತ್ತು ಸರ್ಕಾರದ ಎಚ್ಚರಿಕೆಯನ್ನು ಪ್ಯಾಕೇಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಅಕ್ರಮ ಹಣ ಗಳಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಸೇರಿದಂತೆ 2.70ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.


ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಆರ್.ಜೈನ್, ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಹಾಗೂ ಎಸಿಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ಬರ್ಕೆ ಠಾಣಾ ಇನ್‌ಸ್ಪೆಕ್ಟರ್ ನಾಗೇಶ್, ಪಿಎಸ್‌ಐಗಳಾದ ರೇಖಾ, ಶೋಭಾ, ಧರ್ಮಾವತಿ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಜಲಜಾಕ್ಷಿ, ನಿತೇಶ್, ಮಂಜುನಾಥ, ಲಿಖಿತ್ ಕುಮಾರ್, ವಿಜಯ ಕುಮಾರ್, ಚೇತನ್ ಕುಮಾರ್, ರಾಮಲಿಂಗ, ಸಿದ್ದು, ಚಂದ್ರಿಕಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net