

ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ.
ಅಳಪೆಯಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ನಿಶಾನ್ ಸುರೇಶ್ (35), ಕಪಿತಾನಿಯೋ ಬಸ್ಸು ನಿಲ್ದಾಣದ ಬಳಿ ಲಿಖಿತ್ ಕುಮಾರ್ (36)ನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ಕುಳ ಗ್ರಾಮದ ವಳಚ್ಚಿಲ್ ರೈಲ್ವೇ ಗೇಟ್ ಬಳಿ ಮಲಪುರಂ ಅಕ್ಷಯ್ ಕೆ.ಎಂ. (20)ಎಂಬಾತನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೊಂದೇಲ್ ಶಿವನಗರ ಬಳಿ ಶಕ್ತಿನಗರ ನಿವಾಸಿಗಳಾದ ಪ್ರಸನ್ನ ಕಾಮತ್ (20) ಮತ್ತು ಅಜಯ್ (21) ಹಾಗೂ ಕಾವೂರು ಜಂಕ್ಷನ್ ಬಳಿ ಕೂಳೂರು ಕುದ್ರು ನಿವಾಸಿ ಶಾಲ್ ಎಸ್. (41) ಎಂಬಾತನನ್ನು ಕಾವೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಎಲ್ಲ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.