

ಮಂಗಳೂರು: ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಾ.ಪಾವ್ಲ್ ಜೆರಾರ್ಡ್ ಅಕ್ವಿನಾಸ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ (ಡಿ. ಲಿಟ್.) ಪದವಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಮತ್ತು ತುಮಕೂರು ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು. ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಫಾರ್ ಟೀಚರ್ಸ್ ಇನ್ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಟ್ಸ್ ಆ್ಯಂಡ್ ಇಟ್ಸ್ ಇಫೆಕ್ಟ್ಸ್ ಆನ್ ಜಾಬ್ ಪರ್ಫಾರ್ಮೆನ್ಸ್ ಥ್ರೂ ಇಂಡಿವಿಜುವಲ್ ಜಾಬ್ ಆ್ಯಟಿಟ್ಯೂಡ್ಸ್ ಎಂಬ ಮಹಾಪ್ರಬಂಧಕ್ಕೆ ಈ ಪದವಿ ನೀಡಲಾಯಿತು.
ಪ್ರೊ. ಪಾವ್ಲ್ ಅಕ್ವಿನಾಸ್ರವರು 1995ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಸೋಶಿಯಲ್ ವರ್ಕ್ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ಪರ್ಸೊನೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಇಂಡಸ್ಟ್ರಿಯಲ್ ರಿಲೇಶನ್ಸ್ನಲ್ಲಿ ಎಂ. ಎಸ್. ಡಬ್ಲ್ಯು. ಪದವಿಯ ಜೊತೆಗೆ ಎಂ. ಎ. (ಇಕನಾಮಿಕ್ಸ್), ಎಂ. ಬಿ. ಎ. (ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್), ಎಂ. ಕಾಂ. (ಕೊಸ್ಟಿಂಗ್), ಎಂ. ಕಾಂ. (ಅಡ್ವಾನ್ಸ್ಡ್ ಬ್ಯಾಂಕಿಂಗ್) ಮತ್ತು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.
ಪ್ರಸ್ತುತ ಡಾ. ಪಾವ್ಲ್ ಅಕ್ವಿನಾಸ್ರವರು ಮಂಗಳೂರು ವಿಶ್ವವಿದ್ಯಾಲಯದ ಸೋಶಿಯಲ್ ವರ್ಕ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಮತ್ತು ಆರ್ಗನೈಸೇಶನ್ ಬಿಹೇವಿಯರ್ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವೀಧರರಿಗೆ 30 ವರ್ಷಗಳ ಬೋಧನಾ ಅನುಭವ ಇದೆ.
ಉತ್ತಮ ಬರಹಗಾರರಗಿರುವ ಡಾ. ಅಕ್ವಿನಾಸ್ರವರು ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ. ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಮತ್ತು ಆರ್ಗನೈಸೇಶನ್ ಬಿಹೇವಿಯರ್ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿರುವುದು ಮಾತ್ರವಲ್ಲ ಅಂತರಾಷ್ಟ್ರಿಯ ವಿಚಾರಗೋಷ್ಠಿಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ವಿಷಯ ಮಂಡನೆ ಮಾಡಿರುತ್ತಾರೆ. ಅವರು ಬರೆದ ಪುಸ್ತಕಗಳನ್ನು 60 ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ಕೋರ್ಸುಗಳಲ್ಲಿ ಬಳಸಲಾಗುತ್ತಿದೆ.
ಭಾರತದ ಜೊತೆಗೆ ಅಮೆರಿಕಾದ ಯುನಿವರ್ಸಿಟಿ ಆಫ್ ನಾರ್ಥ್ ವರ್ಜೀನಿಯಾದಲ್ಲಿ ಅವರ ಆರ್ಗನೈಸೇಶನಲ್ ಬಿಹೇವಿಯರ್ ಮತ್ತು ಆರ್ಗನಸೇಶನಲ್ ಸ್ಟ್ರಕ್ಚರ್ ಆ್ಯಂಡ್ ಡಿಸೈನ್ ಪುಸ್ತಕಗಳು ಆಯ್ಕೆಯಾಗಿವೆ.