

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದಲ್ಲಿ 10 ವರ್ಷಗಳ ಕಾಲ ಸಮಾದೇಷ್ಟರಾಗಿ ನಿಷ್ಕಾಮ ಸೇವೆ ಮಾಡಿದ ಡಾ.ಮುರಲೀ ಮೋಹನ್ ಚೂಂತಾರು ಅವರಿಗೆ ಭಾರತ ಸರ್ಕಾರದ ಗೃಹಸಚಿವಾಲಯದಿಂದ ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರವನ್ನು ಗೃಹರಕ್ಷಕದಳ ಮಹಾ ಸಮಾದೇಷ್ಠರಾದ ಪ್ರಶಾಂತ್ ಕುಮಾರ್ ಸಿಂಗ್ ಠಾಕೂರ್ ಅವರು ಶುಕ್ರವಾರ ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಗೃಹರಕ್ಷಕ ದಳದ 62ನೆಯ ಉತ್ತಾನ ದಿನಾಚರಣೆ ಸಂದರ್ಭದಲ್ಲಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಮಹಾ ಸಮಾದೇಷ್ಠ ಅಕ್ಷಯ್.ಎಂ. ಹಾಕೆ (ಐಪಿಎಸ್), ಅಪರ ಮಹಾ ಸಮಾದೇಷ್ಟ ನಂಜುಂಡ ಸ್ವಾಮಿ (ಐ ಪಿ ಎಸ್), ಗೃಹರಕ್ಷಕ ದಳ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.