ಡಾ. ಸಂಧ್ಯಾ ಶೆಣೈ ಅವರಿಗೆ ಡಾ. ಕಲ್ಪನಾ ಚಾವ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ

mng--3 Oct sandya shenoy u award
Published on

ಮಂಗಳೂರು: ಕರ್ನಾಟಕ ಸರ್ಕಾರದಿಂದ ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಷ್ಠಿತ ಡಾ. ಕಲ್ಪನಾ ಚಾವ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನು ಮುಕ್ಕ ಶ್ರೀನಿವಾಸ್ ವಿವಿಯ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಎಸ್‌ಇಆರ್‌ಬಿ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ ಯು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು.


ಬೆಂಗಳೂರಿನ ಟಾಟಾ ಅಡಿಟೋರಿಯಂನಲ್ಲಿ ಸೆ.26ರಂದು ನಡೆದ ಕಾರ್ಯಕ್ರಮದಲ್ಲಿ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್, ಸಚಿವ ಎನ್.ಎಸ್. ಬೋಸರಾಜು ಮೊದಲಾದವರು ಉಪಸ್ಥಿತರಿದ್ದರು.


ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿತ್ತು. ಡಾ. ಸಂಧ್ಯಾ ಅವರು ಚಾಲ್ಕೊಜೆನೈಡ್ಸ್ ಮತ್ತು ಆಕ್ಸೈಡ್ ವಸ್ತುಗಳಲ್ಲಿ ಹೊಸ ಅನುರಣನ ಡೋಪಾಂಟ್‌ಗಳ ಆವಿಷ್ಕಾರದ ಮೂಲಕ ಥರ್ಮೋ ಎಲೆಕ್ಟ್ರಿಕ್ಸ್ ಕ್ಷೇತ್ರಕ್ಕೆ ಅವರ ಪ್ರವರ್ತಕ ಕೊಡುಗೆಗಾಗಿ ಪ್ರಶಸ್ತಿಯನ್ನು ಪಡೆದರು. ಕಳೆದ ಎರಡು ವರ್ಷಗಳಲ್ಲಿನ ಆಕೆಯ ಪ್ರಭಾವಶಾಲಿ ಸಂಶೋಧನಾ ಕಾರ್ಯದ ಆಧಾರದ ಮೇಲೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಪ್ರಕಟಿಸಿದ ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ.
ಈ ಸಾಧನೆಗಳನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿಎ ಎ. ರಾಘವೇಂದ್ರ ರಾವ್, ಸಹ ಕುಲಪತಿ ಡಾ. ಎ. ಶ್ರೀನಿವಾಸ್ ರಾವ್, ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net