

ಮಂಗಳೂರು: ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವ ಅವರ ನಿರ್ಮಾಣದ ಕೃಷ್ಣ ಜೆ. ಪಾಲೆಮಾರ್ ಅರ್ಪಿಸುವ ‘ದಸ್ಕತ್’ ತುಳು ಚಲನಚಿತ್ರ ಡಿ.13ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ‘ದಸ್ಕತ್’. ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ತುಳು ಚಿತ್ರರಂಗದಲ್ಲೇ ವಿಭಿನ್ನವಾಗಿ ಈ ಚಿತ್ರ ಮೂಡಿಬಂದಿದೆ. ಈವರೆಗೆ ತುಳು ಚಿತ್ರರಂಗದಲ್ಲಿ ನೀಡದ ಕಥೆ ಇದರಲ್ಲಿದೆ ಎಂದರು.
ಚಿತ್ರದ ವಿತರಕ ಸಚಿನ್ ಉಪ್ಪಿನಂಗಡಿ, ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆ, ನಾಯಕಿ ಭವ್ಯ ಪೂಜಾರಿ, ರಾಹುಲ್ ಕುಡ್ವ, ಪ್ರಜ್ಞೇಶ್ ಶೆಟ್ಟಿ ಉಪಸ್ಥಿತರಿದ್ದರು.
99 ರೂ.ಗೆ ಟಿಕೆಟ್
ಚಿತ್ರ ಬಿಡುಗಡೆಯ ಮೊದಲ ದಿನವಾದ ಡಿ.13 ರಂದು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ 99 ರೂ.ಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಕರಾವಳಿಯ 15 ಚಿತ್ರ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಮೊದಲ ದಿನವೇ ಚಿತ್ರ ವೀಕ್ಷಿಸುವ ಮೂಲಕ ರಿಯಾಯಿತಿಯ ಅವಕಾಶ ಪಡೆದುಕೊಳ್ಳಬೇಕು ಎಂದು ಅನೀಶ್ ಪೂಜಾರಿ ತಿಳಿಸಿದ್ದಾರೆ.’