

ಮಂಗಳೂರು: ಜಪ್ಪಿನಮೊಗರು ಸಂಗಮ್ ಫ್ರೆಂಡ್ಸ್ ಕ್ಲಬ್ ಇದರ 30ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ನಿಗದಿತ ಓವರುಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಂಗಮ್ ಕಪ್ 2025 ನಗರದ ಎಕ್ಕೂರು ಫಿಶರಿಸ್ ಕಾಲೇಜು ಮೈದಾನ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಕಾರ್ಪೋರೇಟರ್‌ಗಳಾದ ಟಿ.ಪ್ರವೀಣ್‌ಚಂದ್ರ ಆಳ್ವ, ವೀಣಾಮಂಗಳ, ಭರತ್‌ಕುಮಾರ್, ಸಂದೀಪ್ ಗರೋಡಿ, ಉದ್ಯಮಿ ಪ್ರಾಣೇಶ್ ರಾವ್, ಶಿವಾನಂದ ರಾವ್ ಬಜೆಹಿತ್ಲು, ವಕೀಲ ಮೋಹನ್‌ದಾಸ್ ರೈ ಭಾಗವಹಿಸಿದ್ದರು. ಒಟ್ಟು 20 ತಂಡಗಳು ಭಾಗವಹಿಸಿದ್ದು, ನ್ಯೂ ಬಾಯ್ಸ ಬಜಾಲ್ ತಂಡ ಪ್ರಶಸ್ತಿಯೊಂದಿಗೆ 30,030 ರೂ. ನಗದು ಹಾಗೂ ಲಕ್ಕಿಸ್ಟಾರ್ ಬಜಾಲ್ ತಂಡ ದ್ವಿತೀಯ ಪ್ರಶಸ್ತಿಯೊಂದಿಗೆ 20,030 ರೂ. ನಗದು ಗೆದ್ದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾರ್ಪೋರೇಟರ್ ಕಿರಣ್ ಕೋಡಿಕಲ್, ಮಾಜಿ ಕಾರ್ಪೋರೇಟರ್ ಜೆ.ಸುರೇಂದ್ರ, ಸುಮತಿ ಚಂದ್ರಶೇಖರ್, ಉದ್ಯಮಿ ಅರುಣ್‌ಕುಮಾರ್, ದಿನಕರ್ ಕುಲಾಲ್, ರಾಜ ನಾಯ್ಕ ತೊಕ್ಕೊಟ್ಟು, ಹರೀಶ್ ಕುಮಾರ್, ಶಂಕರ್ ಕಡೆಕಾರ್, ಯೋಗೀಶ್ ರೈ, ಶೈಲೇಶ್ ಭಂಡಾರಿ ತಾರ್ದೊಲ್ಯ, ಕೃಷ್ಣ ಶೆಟ್ಟಿ ಬಜೆಹಿತ್ಲು ಮೊದಲಾದ ಗಣ್ಯರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಸುಧಾಕರ್ ಜೆ ಸ್ವಾಗತಿಸಿದರು. ಕಾರ್ಯದರ್ಶಿ ಕೀರ್ತೇಶ್ ಅಮೀನ್ ವಂದಿಸಿದರು. ಸಂದೇಶ್ ಕುಮಾರ್
ಹಾಗೂ ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.