

ಮಂಗಳೂರು: ವಿಶ್ವಕಪ್ ಪಂದ್ಯಾವಳಿಯ ಆಸ್ಪ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಮೇಲೆ ಸಾರ್ವಜನಿಕರಿಂದ ಬೆಟ್ಟಿಂಗ್‌ಗೆ ಹಣ ಪಡೆದುಕೊಂಡಿದ್ದ ಕದ್ರಿ ಕಂಬಳದ ಕಿರಣ ಬಾಬು (42) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಬೆಟ್ಟಿಂಗ್‌ಗೆ ಸಾರ್ವಜನಿಕರಿಂದ ಪಡೆದ 1 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಯೋಗೀಶ್ವರನ್ ಮತ್ತು ಸಿಬ್ಬಂದಿ ರಮೇಶ್ ಮತ್ತು ಸುರೇಶ ಕಾರ್ಯಾಚರಣೆ ನಡೆಸಿದ್ದರು.