ದ.ಕ. ಜಿಲ್ಲೆ ಪ್ರಕರಣ ತುಸು ಇಳಿಕೆ

corona
Published on

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 91 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ. ಸತತ ಒಂದು ವಾರದಿಂದ 100ರ ಮೇಲೆಯೇ ಪ್ರಕರಣಗಳು ದಾಖಲಾಗುತ್ತಿದ್ದು, ಮಂಗಳವಾರ 100ರೊಳಗೆ ನಿಂತಿದೆ.

ಡಯಾಬಿಟಿಸ್, ಅಸ್ತಮಾ ಇದ್ದ ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದ 65 ವರ್ಷದ ಮಹಿಳೆ, ತೀವ್ರ ಉಸಿರಾಟ ತೊಂದರೆ ಇದ್ದ 55 ವರ್ಷದ ಉಡುಪಿ ಕುಂದಾಪುರ ಮೂಲದ ಪುರುಷ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಮಂಗಳೂರಿನ 70 ವರ್ಷದ ವೃದ್ಧ ಸಾವಿಗೀಡಾದವರು.

ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 2452ಕ್ಕೆ ಏರಿಕೆಯಾಗಿದ್ದು 1414 ಸಕ್ರಿಯ ಪ್ರಕರಣಗಳಿವೆ. ಮಂಗಳವಾರ 47 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಡಿಸ್‌ಚಾರ್ಜ್ ಆದವರ ಸಂಖ್ಯೆ 985 ತಲುಪಿದೆ. ಪ್ರಾಥಮಿಕ ಸಂಪರ್ಕದಿಂದ 20, ಐಎಲ್‌ಐ ಪ್ರಕರಣಗಳು 29, ತೀವ್ರ ಉಸಿರಾಟ ತೊಂದರೆಯ 5 ಮಂದಿ, ಗಲ್ಫ್‌ನಿಂದ ಹಿಂದಿರುಗಿದ ಒಬ್ಬರು, ಸರ್ಜರಿ ಪೂರ್ವ ತಪಾಸಣೆಯ ಒಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. 35 ಮಂದಿಯ ಸಂಪರ್ಕದ ಶೋಧ ನಡೆಯುತ್ತಿದೆ.

44

ಕಾಸರಗೋಡು: ಜಿಲ್ಲೆಯ 44 ಮಂದಿಯಲ್ಲಿ ಮಂಗಳವಾರ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ ಐವರು ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net