ಮಾದಕ ವಸ್ತು ಸೇವಿಸಿದ ಐವರ ಬಂಧನ

drugs
Published on

ಮಂಗಳೂರು: ನಗರದ ಉತ್ತರ ಪೊಲೀಸ್ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಸೇವನೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.


ಅನ್ಸಾರಿ ಕ್ರಾಸ್ ರೋಡ್ ಮ್ಯಾರೇಜ್ ಹಾಲ್ ಬಳಿ ಮೂವರು ಯುವಕರು ನಿಂತಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೊಹಮ್ಮದ್ ಹಮೀದ್ ಅಮೀರ್ (28), ಅಲ್ ಆರಾಫ್ (30), ಮುಹಮ್ಮದ್ ಶರೀಫ್ (25) ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಮಾದಕದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ.


ಇನ್ನೊಂದು ಪ್ರಕರಣದಲ್ಲಿ ಮಂಜನಾಡಿ ಗ್ರಾಮದ ಕಲ್ಕಟ್ಟ ಬಳಿ ತಲುಪಿದಾಗ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಉಮ್ಮರ್ ಪಾರೂಕ್(35), ಮೊಹಮ್ಮದ್ ಇರ್ಷಾದ್ (33) ಎಂಬವರನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳು ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net