ತೀವ್ರ ಸ್ವರೂಪ ಪಡೆದ ಮಂಗಳೂರು ಕಾಂಗ್ರೆಸ್ ಪ್ರತಿಭಟನೆ; ಬಸ್‌ಗೆ ಕಲ್ಲೆಸೆತ, ರಾಜಭವನಕ್ಕೆ ಬಾಂಗ್ಲಾ ಪ್ರಧಾನಿ ಕಚೇರಿಯ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ

1000919575
Published on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ದಕ್ಷಿಣ ಕನ್ನಡ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಪ್ರತಿಭಟನೆ ಅಂಗವಾಗಿ ಮಂಗಳೂರು ನಾರಾಯಣಗುರು ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿ ತನಕ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು- ಜೋಕಟ್ಟೆ ನಡುವೆ ಸಂಚರಿಸುವ 2ಸಿ ನಂಬರ್‌ನ ಒಂದು ಬಸ್‌ಗೆ ಕಲ್ಲು ಹೊಡೆದು, ಟಯರ್ ಸುಟ್ಟು ಪ್ರತಿಭಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net