ಅಶಾಂತಿ ಸೃಷ್ಟಿಸಿದರೆ ಗೂಂಡಾ ಕಾಯ್ದೆ, ಗಡಿಪಾರು ರೌಡಿ ಶೀಟರ್‌ಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

mng--11 Oct Roudy parade
Published on


ಮಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥೃ ಕೆಡಿಸುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ಗೂಂಡಾ ಕಾಯ್ದೆ ಹೇರಿ ಗಡಿ ಪಾರು ಮಾಡಲಾಗುವುದು ಎಂದು ರೌಡಿಶೀಟರ್‌ಗಳಿಗೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಎಚ್ಚರಿಕೆ ನೀಡಿದ್ದಾರೆ.


ಪೊಲೀಸ್ ಮೈದಾನದಲ್ಲಿ ಗುರುವಾರ ಕಮಿಷನರೆಟ್ ವ್ಯಾಪ್ತಿಯ ಎಲ್ಲ ಠಾಣೆಗಳ 262 ರೌಡಿಶೀಟರ್‌ಗಳ ಪರೇಡ್ ನಡೆಸಲಾಯಿತು. ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕು. ಈಗಾಗಲೇ ತೊಡಗಿಸಿಕೊಂಡಿರುವ ಗೌರವಯುತ ವೃತ್ತಿಗಳಲ್ಲಿ ಮುಂದುವರಿಯಬೇಕು. ಪ್ರತಿಯೊಬ್ಬರ ಚಲನವಲನಗಳನ್ನು ಇಲಾಖೆ ಗಮನಿಸುತ್ತಿರುತ್ತದೆ. ಪುನಃ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.


ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ಬಿ.ಪಿ. ದಿನೇಶ್ ಕುಮಾರ್, ಎಸಿಪಿಗಳು, ಸಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net