ಮಂಗಳೂರು ಪಾರ್ಕ್ ಮಾಡಿದ್ದ ಎರಡು ದ್ವಿಚಕ್ರ ವಾಹನ ಕಳವು

FIR-2
Published on

ಮಂಗಳೂರು: ನಗರದ ಎರಡು ಕಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಘಟನೆ ನಡೆದಿದೆ.


ಕೊಟ್ಟಾರಚೌಕಿ ಫ್ಲೈ ಓವರ್ ಎದುರಿನ ಅಂಗಡಿಯೊಂದರ ಬಳಿ ಎ.4ರಂದು ಲೋಕೇಶ್ ಕುಮಾರ್ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದೆ. ಅವರು ಮಧ್ಯಾಹ್ನ 2 ಗಂಟೆಗೆ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಕೀಯನ್ನು ಅದರಲ್ಲೇ ಬಿಟ್ಟು ಅಂಗಡಿಗೆ ಹೋಗಿದ್ದರು. 5 ನಿಮಿಷದ ಅನಂತರ ವಾಪಸ್ ಬಂದು ನೋಡಿದಾಗ ವಾಹನ ಕಳವಾಗಿತ್ತು. ಕಳವಾದ ವಾಹನದ ಅಂದಾಜು ಮೌಲ್ಯ 95,000 ರೂ. ಎಂಬುದಾಗಿ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.


ಇನ್ನೊಂದು ಪ್ರಕರಣದಲ್ಲಿ ಸುಕೇಶ್ ಅವರು ದ್ವಿಚಕ್ರ ವಾಹನವನ್ನು ಮಾ.21ರಂದು ಬೆಳಗ್ಗೆ 9.20ಕ್ಕೆ ನಗರದ ಪಿವಿಎಸ್ ವೃತ್ತದ ಬಳಿ ಇರುವ ಕಾರು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಹೋಗಿದ್ದರು. ಕೆಲಸ ಮುಗಿಸಿ ಸಂಜೆ 5.30ಕ್ಕೆ ವಾಪಸ್ ಬಂದು ನೋಡಿದಗ ವಾಹನ ಕಳವಾಗಿತ್ತು. ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net